ಕಡಲೆ ಇಳುವರಿಯಲ್ಲಿ ಭಾರಿ ಕುಸಿತ! ➤‌ ರೈತರು ಕಂಗಾಲು

(ನ್ಯೂಸ್ ಕಡಬ) newskadaba.com ಜಗಳೂರು,ಫೆ.15. ಪ್ರತಿ ವರ್ಷ ಹಿಂಗಾರು ಹಂಗಾಮಿನಲ್ಲಿ ತಾಲೂಕಿನ ರೈತರ ಕೈ ಹಿಡಿಯುತ್ತಿದ್ದ ಕಡಲೆ ಬೆಳೆ ಈ ಬಾರಿ ಕೈಕೊಟ್ಟಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕಡಲೆ ಇಳುವರಿ ತೀವ್ರ ಕುಸಿದಿದ್ದು, ರೈತ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾನೆ.

ಮುಂಗಾರು ಹಂಗಮಿನಲ್ಲಿ ಮೆಕ್ಕೆಜೋಳ ಬೆಳೆವ ರೈತರು, ಅಕ್ಟೋಬರ್‌ ವೇಳೆಗೆ ಕಟಾವು ಮಾಡಿ, ಹಿಂಗಾರು ಬೆಳೆಯಾಗಿ ಕಡಲೆ ಬಿತ್ತನೆ ಮಾಡುತ್ತಾರೆ. ಈ ಬಾರಿ ತಾಲೂಕಿನ 6 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಕಡಲೆ ಬಿತ್ತನೆಯಾಗಿದೆ. ಆದರೆ ಇಳುವರಿ ಕುಂಠಿತವಾಗಿದೆ ಎಂದು ವರದಿ ತಿಳಿಸಿದೆ.

Also Read  ಶ್ರೀನಿವಾಸ್ ವಿಶ್ವವಿದ್ಯಾಲಯದಲ್ಲಿ 74ನೇ ಸ್ವಾತಂತ್ರ್ಯೋತ್ಸವ

error: Content is protected !!
Scroll to Top