ಉದ್ಯೋಗಿಗಳಿಗೆ ಶಾಕ್ ಕೊಟ್ಟ ಮತ್ತೊಂದು ಕಂಪನಿ ➤  ಫೋರ್ಡ್ ನಿಂದ 3,800 ಮಂದಿ ವಜಾ.!

(ನ್ಯೂಸ್ ಕಡಬ)newskadaba.com  ನವದೆಹಲಿ, ಫೆ.15. ಜಾಗತಿಕವಾಗಿ ಆರ್ಥಿಕ ಬಿಕ್ಕಟ್ಟು ಎದುರಾಗಬಹುದೆಂಬ ಆತಂಕದಿಂದ ಅನೇಕ ಕಂಪನಿಗಳು ಉದ್ಯೋಗಿಗಳ ಕಡಿತ ಪ್ರಕ್ರಿಯೆ ಆರಂಭಿಸಿವೆ. ಅಮೆಜಾನ್, ಮೈಕ್ರೋಸಾಫ್ಟ್, ಗೂಗಲ್ ಸೇರಿದಂತೆ ಬಹುತೇಕ ಕಂಪನಿಗಳು ಈಗಾಗಲೇ ಸಾವಿರಾರು ಮಂದಿಯನ್ನು ಮನೆಗೆ ಕಳುಹಿಸಿವೆ.

ಉದ್ಯೋಗ ಕಡಿತ ಪ್ರಕ್ರಿಯೆ ಈಗಲೂ ಮುಂದುವರೆದಿದ್ದು, ಇದೀಗ ಅಮೆರಿಕದ ಪ್ರಮುಖ ಕಾರು ತಯಾರಿಕಾ ಕಂಪನಿ ಫೋರ್ಡ್ 3,800 ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ನಿರ್ಧರಿಸಿದೆ.

ಬ್ರಿಟನ್ ಮತ್ತು ಜರ್ಮನಿಯಲ್ಲಿ ಈ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ. ಜರ್ಮನಿಯಲ್ಲಿ ಉತ್ಪಾದನೆ ಹಾಗೂ ಅಭಿವೃದ್ಧಿ ವಿಭಾಗದಲ್ಲಿ 2,300 ಹುದ್ದೆಗಳು ಹಾಗೂ ಬ್ರಿಟನ್ ನಲ್ಲಿ 1,300 ಹುದ್ದೆಗಳ ಜೊತೆಗೆ ಇತರೆಡೆ 200 ಹುದ್ದೆಗಳನ್ನು ಕಡಿತ ಮಾಡಲಾಗುತ್ತದೆ ಎಂದು ಫೋರ್ಡ್ ಕಂಪನಿ ಪ್ರಕಟಣೆಯ ಮೂಲಕ ತಿಳಿಸಿದೆ.

 

error: Content is protected !!

Join the Group

Join WhatsApp Group