ಪಹಣಿ ಮತ್ತು ಎಂಆರ್ ವಿತರಣೆ ಸೇವಾ ಶುಲ್ಕ ಪರಿಷ್ಕರಿಸಿ ➤  ರಾಜ್ಯ ಸರ್ಕಾರ ಆದೇಶ.!

(ನ್ಯೂಸ್ ಕಡಬ)newskadaba.com  ಮಡಿಕೇರಿ, ಫೆ.15. ಪಹಣಿ ಹಾಗೂ ಎಂಆರ್ ವಿತರಣೆ ಸೇವೆಗೆ ಸಂಬಂಧಿಸಿದಂತೆ ಶುಲ್ಕವನ್ನು ಸಂಗ್ರಹಿಸಲು ಕಂದಾಯ ಇಲಾಖೆಯ ಪಾಲು ಹಾಗೂ ಉದ್ಯಮಿದಾರರ ಪಾಲನ್ನು ಪರಿಷ್ಕರಿಸಿ ಸರ್ಕಾರ ಆದೇಶ ಹೊರಡಿಸಿದೆ.

ಎಂಆರ್ ಮತ್ತು ಪಹಣಿ ವಿತರಣೆಗೆ ಪ್ರತಿ ಪಹಣಿಗೆ ಪರಿಷ್ಕರಿಸಬೇಕಾದ ಬಳಕೆದಾರರ ಶುಲ್ಕದ ದರ ರೂ.25(4 ಪುಟಗಳವರೆಗೆ), ಪ್ರತಿ ಹೆಚ್ಚುವರಿ ಪುಟಕ್ಕೆ (5ನೇ ಪುಟದಿಂದ) ತಾಲ್ಲೂಕು ಭೂಮಿ ಕೇಂದ್ರಗಳಲ್ಲಿ ಮತ್ತು ಐಆರ್‍ಟಿಸಿ(ಆನ್‍ಲೈನ್) ವಿತರಣೆಗೆ ರೂ.25, ಹೆಚ್ಚುವರಿ ಪುಟಕ್ಕೆ ರೂ. 5, ಐ-ವಾಲೆಟ್ ಮತ್ತು ಇತರೆ ಬಳಕೆದಾರರ ಮೂಲಕ ಪಹಣಿ ವಿತರಣೆಗೆ ಕಂದಾಯ ಇಲಾಖೆಯ ಪಾಲು ರೂ.10 ಮತ್ತು ಐ-ವಾಲೆಟ್ ಮೂಲ ಪಹಣಿ ವಿತರಣೆ ಮತ್ತು ಭೂಮಿ ದತ್ತಾಂಶವನ್ನು ಬಳಸಿಕೊಂಡು ಪಹಣಿ ವಿತರಣೆ ಸೇವೆಯನ್ನು ನೀಡುವ ಇತರೆ ಬಳಕೆದಾರರ ಪಾಲು ರೂ.15 ಮತ್ತು ಹೆಚ್ಚುವರಿ ಪುಟಕ್ಕೆ ರೂ.5 ಆಗಿದೆ ಎಂದು ಭೂಮಾಪನ ಇಲಾಖೆಯ ನಿರ್ದೇಶಕರು ತಿಳಿಸಿದ್ದಾರೆ.

Also Read  ರಸ್ತೆ ಬದಿ ನಿಂತಿದ್ದ ಬೈಕ್ ಗೆ ಬಸ್ ಢಿಕ್ಕಿ ➤ ಶಿಕ್ಷಕ ಮೃತ್ಯು

error: Content is protected !!
Scroll to Top