(ನ್ಯೂಸ್ ಕಡಬ) newskadaba.com ಆಫ್ರಿಕಾ, ಫೆ.15. ಆಫ್ರಿಕಾದ ಈಕ್ವಟೋರಿಯಲ್ ಗಿನಿಯಾದಲ್ಲಿ ಎಬೋಲಾ ರೀತಿಯ ಮಾರ್ಬರ್ಗ್ ವೈರಸ್ ಪತ್ತೆಯಾಗಿದ್ದು, ಏಕಾಏಕಿ 9 ಮಂದಿ ಮೃತಪಟ್ಟಿದ್ದಾರೆ ಎಂದುWHO ದೃಢಪಡಿಸಿದೆ. ಹಣ್ಣಿನ ಬಾವಲಿಗಳಿಂದ ಹರಡುವ ಮಾರ್ಬರ್ಗ್ ವೈರಸ್ ಹೆಚ್ಚು ಸಾಂಕ್ರಾಮಿಕವಾಗಿದೆ. ವಿಪರೀತ ವಾಂತಿ, ಅತಿಸಾರ, ಜ್ವರ ಮತ್ತು ಆಯಾಸದಂತಹ ತೀವ್ರ ರಕ್ತಸ್ರಾವದ ಲಕ್ಷಣಗಳೊಂದಿಗೆ ಅನಾರೋಗ್ಯವನ್ನು ಉಂಟು ಮಾಡುತ್ತದೆ.
ರೋಗಲಕ್ಷಣಗಳು ಹೆಮರಾಜಿಕ್ ಜ್ವರವನ್ನು ಉಂಟು ಮಾಡುತ್ತದೆ. ಇದು ಎಬೋಲಾ ಕಾಯಿಲೆಯಂತೆಯೇ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ. ಕಳೆದ ವಾರ ಈಕ್ವಟೋರಿಯಲ್ ಗಿನಿಯಾದ ಮಾದರಿಗಳನ್ನು ಸೆನೆಗಲ್‌ನ ಲ್ಯಾಬ್‌ಗೆ ಕಳುಹಿಸಿದ ನಂತರ ಆರೋಗ್ಯ ಸಂಸ್ಥೆ ಸಾಂಕ್ರಾಮಿಕ ರೋಗವನ್ನು ದೃಢಪಡಿಸಿದೆ ಎಂದು ವರಿಯಾಗಿದೆ.