(ನ್ಯೂಸ್ ಕಡಬ) newskadaba.com ಮಡಿಕೇರಿ, ಫೆ.15. ಮಡಿಕೇರಿ-ವಿರಾಜಪೇಟೆ 66 ಕೆವಿ ವಿದ್ಯುತ್ ಮಾರ್ಗದ ಕಾಮಗಾರಿ ಕೈಗೊಳ್ಳಬೇಕಿರುವುದರಿಂದ ಬೃಹತ್ ಕಾಮಗಾರಿ ವಿಭಾಗ ಕೊಡಗು ಜಿಲ್ಲೆ ಕ.ವಿ.ಪ್ರ.ನಿ.ನಿ. ಮೈಸೂರು ಅವರ ಕೋರಿಕೆಯಂತೆ ಫೆಬ್ರುವರಿ , 15 ರಂದು ಬೆಳಗ್ಗೆ 09 ಗಂಟೆಯಿಂದ ಸಂಜೆ 5 ಗಂಟೆಯವರೆಗೆ 33 ಕೆವಿ ವಿರಾಜಪೇಟೆ-ಮೂರ್ನಾಡು ಮಾರ್ಗದಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು ಎಂದು ವರದಿ ತಿಳಿಸಿದೆ.
ಈ ಕುರಿತು ಪಾರಾಣೆ, ಮೂರ್ನಾಡು, ನಾಪೋಕ್ಲು, ಹೊದ್ದೂರು, ಮರಗೋಡು, ಬೇತು, ಕಕ್ಕಬೆ, ನೆಲಜಿ, ಹಾಕತ್ತೂರು, ಕಾಂತೂರು, ಸುತ್ತಮುತ್ತಲವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ರವರು ಕೋರಿದ್ದಾರೆ ಎನ್ನಲಾಗಿದೆ.