► ಕಡಬ: 38 ನೇ ವರ್ಷದ ಸಂಭ್ರಮದ ಸಂಯುಕ್ತ ಕ್ರಿಸ್ಮಸ್ ಆಚರಣೆ

(ನ್ಯೂಸ್ ಕಡಬ) newskadaba.com ಕಡಬ, ಡಿ.26. ಪರಿಸರದ ಕ್ರೈಸ್ತ ಬಾಂಧವರು ಒಟ್ಟುಗೂಡಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಸಂಯುಕ್ತ ಕ್ರಿಸ್ಮಸ್ ಆಚರಣೆಯನ್ನು ಪುತ್ತೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಗೀವರ್ಗೀಸ್ ಮಾರ್ ಮಕಾರಿಯೋಸ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಸಂಜೆ ಕಡಬದ ಆರೋಗ್ಯ ಮಾತಾ ಶಿಲುಬೆ ಗೋಪುರದ ಬಳಿಯಿಂದ ವಿಜೃಂಭಣೆಯ ಕ್ರಿಸ್ಮಸ್ ಸಂದೇಶ ರ್ಯಾಲಿಯು ಆರಂಭಗೊಂಡು, ಕಡಬ ಪೇಟೆಯ ಮೂಲಕ ಸಂಚರಿಸಿ ಬಳಿಕ ಕಡಬ ಸೈಂಟ್ ಜೋಕಿಮ್ಸ್ ದೇವಾಲಯದ ವಠಾರದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಅತಿಥಿಯಾಗಿ ಕಡಬ ತಹಶೀಲ್ದಾರರಾದ ಜಾನ್ ಪ್ರಕಾಶ್ ಭಾಗವಹಿಸಿದರು. ರೆ| ಫಾ| ಪೀಟರ್ ಜೋನ್ OIC ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಗೀವರ್ಗೀಸ್ ಮಾರ್ ಮಕಾರಿಯೋಸ್ ಹಾಗೂ ಕಡಬ ತಹಶೀಲ್ದಾರರಾದ ಜಾನ್ ಪ್ರಕಾಶ್ ರವರಿಗೆ ಹುಟ್ಟೂರ ಸನ್ಮಾನ ನಡೆಯಿತು.

Also Read  ಹಲವು ಕಡೆ ಕಳವು ಪ್ರಕರಣ ➤ ಕಿಲಾಡಿ ದಂಪತಿ ಅರೇಷ್ಟ್

ವೇದಿಕೆಯಲ್ಲಿ ಫಾ| ಅಬ್ರಹಾಂ ಪಿ.ಕೆ., ಫಾ| ಮಾಣಿ ಚೆಮ್ಮನಂ, ಫಾ| ಸ್ಟಿಜೋ, ಎ.ಎಸ್. ಪೈಲಿ ಮೊದಲಾದವರು ಉಪಸ್ಥಿತರಿದ್ದರು. ರೆ| ಫಾ| ರೊನಾಲ್ಡ್ ಲೋಬೋ ಸ್ವಾಗತಿಸಿ, ಜೋಯಲ್ ಎಂ.ಜೆ. ವಂದಿಸಿದರು.

ವಿವಿಧ ಚರ್ಚ್ ಮತ್ತು ಸಂಸ್ಥೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಕೊನೆಯಲ್ಲಿ ನಿವಿನ್ ಕುರಿಯಾಕೋಸ್ ನಿರ್ದೇಶನದಲ್ಲಿ ಕಡಬ ತಾಲೂಕಿನ ಬಗ್ಗೆ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಿತು.

error: Content is protected !!
Scroll to Top