(ನ್ಯೂಸ್ ಕಡಬ)newskadaba.com ಪುತ್ತೂರು, ಫೆ.15. ಕಾರು ನಿಯಂತ್ರಣ ಕಳೆದುಕೊಂಡು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಕಾರು 50 ಅಡಿ ಆಳದ ತೋಟಕ್ಕೆ ಬಿದ್ದು ಓರ್ವ ಮೃತಪಟ್ಟು, ಮೂವರು ಗಾಯಗೊಂಡ ಘಟನೆ ಸಂಟ್ಯಾರು ಬಳಿ ನಡೆದಿದೆ.
ನಿಡ್ಪಳ್ಳಿ ಗ್ರಾ.ಪಂ.ನ ಬೆಂಬಲಿತ ಸದಸ್ಯ ಮುರಳೀಧರ್ ಭಟ್ ಮೃತರು ಎಂದು ಗುರುತಿಸಲಾಗಿದೆ. ಇವರು ಬೆಟ್ಟಂಪಾಡಿಯ ದಿಲೀಪ್ ಕುಮಾರ್‌ರಾವ್, ಶಶಿಕುಮಾರ್, ನವನೀತ್ ಜೊತೆ ಕಾರಿನಲ್ಲಿ ಬೆಟ್ಟಂಪಾಡಿ ಕಡೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಕೂಡಲೇ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಮುರಳೀಧರ್ ಭಟ್ ನಿಧನರಾಗಿದ್ದಾರೆ ಎನ್ನಲಾಗಿದೆ.