(ನ್ಯೂಸ್ ಕಡಬ)newskadaba.com ಬೆಳಗಾವಿ, ಫೆ.14. ಕುಡಿದ ಮತ್ತಿನಲ್ಲಿ ಯುವಕನೊಬ್ಬ ಕಟ್ಟಡದ 3ನೇ ಮಹಡಿಯಿಂದ ಜಿಗಿದು ಮೃತಪಟ್ಟ ಘಟನೆ ಬೆಳಗಾವಿ ನಗರದ ಅಂಬೇಡ್ಕರ್ ರಸ್ತೆಯ ತಮ್ಮಣ್ಣ ಆರ್ಕೆಡ್ ನಲ್ಲಿ ನಡೆದಿದೆ.
ಯೋಗೇಶ್ ಶಾನಭಾಗ (28) ಮೃತ ಯುವಕ. ಈತ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಮೂಲದವರು. ಸ್ನೇಹಿತರೊಂದಿಗೆ ಬ್ರೂ 59 ಪಬ್ ಗೆ ಬಂದಿದ್ದು, ಕುಡಿದ ಮತ್ತಿನಲ್ಲಿ ಪಬ್ ನ ಕಿಟಕಿ ಬಳಿ ಬಂದ ಯುವಕ ಏಕಾಏಕಿ ಕಟ್ಟಡದಿಂದ ಕೆಳಗೆ ಜಿಗಿದಿದ್ದಾನೆ.
