ಮದುವೆಯಾಗುವಂತೆ ಯುವಕ ಮತ್ತವನ ಕುಟುಂಬದಿಂದ ಪೀಡನೆ   ➤ ವಿಷ ಸೇವಿಸಿದ್ದ ಯುವತಿ ಮೃತ್ಯು

(ನ್ಯೂಸ್ ಕಡಬ)newskadaba.com ಶಿವಮೊಗ್ಗ, ಫೆ.14. ಎಂಸಿಎ ವ್ಯಾಸಂಗ ಪೂರ್ಣಗೊಳಿಸುವ ಕನಸು ಹೊಂದಿದ್ದ ಯುವತಿಯೊಬ್ಬಳು ಈ ಕಾರಣಕ್ಕಾಗಿಯೇ ಮದುವೆ ಮುಂದೂಡಿಕೊಂಡು ಬಂದಿದ್ದು, ಆದರೆ ಸಂಬಂಧಿ ಯುವಕ ಮತ್ತವನ ಕುಟುಂಬಸ್ಥರು ಪದೇ ಪದೇ ಪೀಡನೆ ನೀಡಿದ್ದರಿಂದ ಮನನೊಂದು ವಿಷ ಸೇವಿಸಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.

ಶಿವಮೊಗ್ಗದಲ್ಲಿ ಈ ಘಟನೆ ನಡೆದಿದ್ದು, ಮೂಲತಃ ಕಂಕನಹಳ್ಳಿಯವರಾದ ನಿರ್ಮಲಾಬಾಯಿ ಎಂಬವರು ಸುಮಾ ಎಂಬಾಕೆಯನ್ನು ದತ್ತು ಪಡೆದು ಸಾಕಿಕೊಂಡಿದ್ದರು. ಪತಿ ಮೃತಪಟ್ಟ ಬಳಿಕ ನಿರ್ಮಲ ಬಾಯಿ, ಸುಮಾ ಜೊತೆ ಶಿವಮೊಗ್ಗದ ಬೊಮ್ಮನಕಟ್ಟೆ ಬಿ ಬ್ಲಾಕ್ ನಲ್ಲಿ ವಾಸವಾಗಿದ್ದು, ಎರಡು ವರ್ಷಗಳ ಹಿಂದೆ ಕಂಕನಹಳ್ಳಿಯ ಪ್ರವೀಣ್ ಎಂಬಾತನ ಜೊತೆ ಸುಮಾ ಮದುವೆ ಮಾಡಲು ಪ್ರಸ್ತಾವನೆ ಬಂದಿತ್ತು.

Also Read  ಬೈಕ್ ಮೇಲಿದ್ದ ಯುವಕನ ರುಂಡ ಕತ್ತರಿಸಿ ಕಗ್ಗೊಲೆ

 

error: Content is protected !!
Scroll to Top