➤ಬೆಂಗಳೂರು ಕ್ಯಾಂಟರ್ ಹರಿದು ಮಹಿಳೆ ಮೃತ್ಯು..!

(ನ್ಯೂಸ್ ಕಡಬ) newskadaba.com. ಬೆಂಗಳೂರು, ಫೆ.14.  ಕಸ್ತೂರಬಾ ರಸ್ತೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಭಾರತೀನಗರದ ನಿವಾಸಿ ಸುಧಾ (37) ಮೃತಪಟ್ಟ ಮಹಿಳೆಯಾಗಿದ್ದಾರೆ. ಮಗಳನ್ನು ಕಾಲೇಜಿಗೆ ಬಿಟ್ಟು ಮನೆಗೆ ಹಿಂತಿರುಗುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಸುಧಾ ಅವರು ಪ್ರತೀನಿತ್ಯ ತಮ್ಮ ಮಕ್ಕಳನ್ನು ಪಿಕ್ ಆ್ಯಂಡ್ ಡ್ರಾಪ್ ಮಾಡುತ್ತಿದ್ದರು. ಅಂತೆಯೇ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ದ್ವಿತೀಯ ಪಿಯುತಿ ಓದುತ್ತಿದ್ದ ಮಗಳನ್ನು ಡ್ರಾಪ್ ಮಾಡಿ ಬೆಳಿಗ್ಗೆ ಸುಧಾ ಮರಳುತ್ತಿದ್ದರು. ಈ ವೇಳೆ ಕಸ್ತೂರ ಬಾ ರಸ್ತೆಯಲ್ಲಿ ಅವರ ಸ್ಕೂಟರ್’ಗೆ ಹಿಂದಿನಿಂದ ಕ್ಯಾಂಟರ್ ಡಿಕ್ಕಿ ಹೊಡೆದಿದೆ. ಇದರಿಂದ ಕೆಳಗೆ ಬಿದ್ದ ಅವರ ಮೇಲೆ ಕ್ಯಾಂಟರ್ ಚಕ್ರಗಳು ಹರಿದಿದೆ. ಪರಿಣಾಮ ಸುಧಾ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Also Read  'ಪೊಲೀಸ್ ಮಕ್ಕಳಿಗಾಗಿ 7 ಪ್ರಮುಖ ಸ್ಥಳಗಳಲ್ಲಿ 7 ಪಬ್ಲಿಕ್ ಶಾಲೆಗಳನ್ನು ತೆರೆಯಲಾಗುತ್ತದೆ'- ಸಿ.ಎಂ ಘೋಷಣೆ

ಕ್ಯಾಂಟರ್ ಚಾಲಕ ಸೈಯದ್ ಅಲ್ಲಾ ಬಕ್ಷ್ (51) ಎಂಬಾತನನ್ನು ಬಂಧಿಸಿರುವ ಪೊಲೀಸರು, ಕ್ಯಾಂಟರ್ ಅನ್ನು ವಶಪಡಿಸಿಕೊಂಡಿದ್ದಾರೆ. ಘಟನೆ ಸಂಬಂಧ ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಲಾಗಿದೆ.

error: Content is protected !!
Scroll to Top