ಅವಶೇಷಗಳಡಿ ಸಿಲುಕಿದ್ದ ಬಾಲಕಿಯನ್ನು ರಕ್ಷಿಸಿದ ಭಾರತೀಯ ಶ್ವಾನಗಳು !!!

(ನ್ಯೂಸ್ ಕಡಬ)newskadaba.com ಟರ್ಕಿ, ಫೆ.14. ಅವಶೇಷಗಳ‌ ಅಡಿ ಸಿಲುಕಿ ಒದ್ದಾಡುತ್ತಿದ್ದ ಬಾಲಕಿಯೋರ್ವಳನ್ನು ಭಾರತೀಯ ಶ್ವಾನಗಳು ರಕ್ಷಿಸಿದ ಘಟನೆ ಭೂಕಂಪ ಪೀಡಿತ ಟರ್ಕಿಯಿಂದ ವರದಿಯಾಗಿದೆ.

ಭೂಕಂಪದಿಂದ ಹಾನಿಗೊಳಗಾದ ಪ್ರದೇಶವು ಕಟ್ಟಡದ ಅವಶೇಷಗಳಿಂದ ತುಂಬಿಕೊಂಡಿದೆ. ಯಂತ್ರೋಪಕರಣಗಳು ವೈಫಲ್ಯ ಕಂಡ ಜಾಗದಲ್ಲಿ ರೊಮಿಯೋ ಮತ್ತು ಜೂಲಿ ಎಂಬ ಶ್ವಾನ ಜೋಡಿ ಮೂಸುತ್ತಾ ಅವಶೇಷಗಳಡಿಯಲ್ಲಿ ಬಾಲಕಿ ಇರುವುದನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.

ಟರ್ಕಿಯಲ್ಲಿ ಫೆಬ್ರುವರಿ 6ರಂದು ಪ್ರಬಲ ಭೂಕಂಪ ಸಂಭವಿಸಿತ್ತು. ಈಗ ಭೂಕಂಪ ಸಂಭವಿಸಿ ಒಂದು ವಾರ ಕಳೆದರೂ ಹಾನಿಗೊಳಗಾದ ಪ್ರದೇಶಗಳಲ್ಲಿ ಬದುಕುಳಿದವರನ್ನು ಹುಡುಕಲು ಎನ್‌ಡಿಆರ್‌ಎಫ್ ತಂಡ ಕಠಿಣ ಪ್ರಯತ್ನವನ್ನು ಮುಂದುವರಿಸಿದೆ.

Also Read  ದಾಂಪತ್ಯ ಜೀವನ ಹಾಳಾಗಿ ಹೋಗೋಕೆ ಇದುವೇ ಕಾರಣ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ

 

error: Content is protected !!
Scroll to Top