ಜೈಲಿನಲ್ಲೇ ಇದ್ದ ಆರೋಪಿಗಾಗಿ 20 ವರ್ಷದಿಂದ ಹುಡುಕಾಟ ನಡೆಸಿದ ಪೊಲೀಸರು !!!

(ನ್ಯೂಸ್ ಕಡಬ)newskadaba.com ಮುಂಬೈ, ಫೆ.14. 20 ವರ್ಷಗಳಿಂದ ಹುಡುಕಾಟ ನಡೆಸುತ್ತಿದ್ದ ಛೋಟಾ ಶಕೀಲ್‌ ಬಣದ ಶಾರ್ಪ್‌ ಶೂಟರ್‌ ಮಾಹಿರ್‌ ಸಿದ್ದಿಖಿ, 5 ವರ್ಷಗಳ ಕಾಲ ಜೈಲಿನಲ್ಲೇ ಇದ್ದರೂ ಪೊಲೀಸರಿಗೆ ಗೊತ್ತಾಗದಿರುವ ಘಟನೆಯೊಂದು ಮುಂಬೈನಲ್ಲಿ ನಡೆದಿದೆ ಎನ್ನಲಾಗಿದೆ.

ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಎಂಸಿಒಸಿಎ) ನ್ಯಾಯಾಲಯದ ನ್ಯಾಯಾಧೀಶರೇ ಇದನ್ನು ಅಚ್ಚರಿಯಿಂದ ಪ್ರಶ್ನಿಸಿದ್ದು, ಈ ಬಗ್ಗೆ ಅಭಿಪ್ರಾಯ ನೀಡಿದ ನ್ಯಾ.ಎ.ಎಂ.ಪಾಟೀಲ್‌, 5 ವರ್ಷ ಜೈಲಿನಲ್ಲೇ ಇದ್ದರೂ ಪೊಲೀಸರಿಗೆ ಗೊತ್ತಾಗದ್ದೇ ಇದ್ದದ್ದು ಹೇಗೆ ? ಎಂದು ಕೇಳಿದ್ದಾರೆ ಎಂದು ವರದಿಯಾಗಿದೆ.

Also Read  ಕಾಸರಗೋಡು: ವಾಸ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ ಆತ್ಮಹತ್ಯೆ

 

error: Content is protected !!
Scroll to Top