ಪುಣೆ ಗೂಗಲ್‌ ಕಚೇರಿಗೆ ಬೆದರಿಕೆ ಕರೆ ➤ಕುಡಿದ ಮತ್ತಿನಲ್ಲಿ ಕರೆ ಮಾಡಿದ್ದ ವ್ಯಕ್ತಿ ವಶಕ್ಕೆ

(ನ್ಯೂಸ್ ಕಡಬ) newskadaba.com. ಬೆಂಗಳೂರು. ಫೆ.13 ಪುಣೆ ಮಹಾರಾಷ್ಟ್ರದ ಪುಣೆಯ ಕೋರೆಗಾಂವ್ ಉದ್ಯಾನವನದ ವಾಣಿಜ್ಯ ಸಂಕೀರ್ಣದಲ್ಲಿರುವ ಗೂಗಲ್ ಕಚೇರಿಯಲ್ಲಿ ಸ್ಫೋಟಕ ಸಾಧನವಿದೆ ಎಂದು ವ್ಯಕ್ತಿಯೊಬ್ಬ ಭಾನುವಾರ ರಾತ್ರಿ ಕರೆ ಮಾಡಿದ್ದಾನೆ. ಈ ಹಿನ್ನೆಲೆ, ಪುಣೆ ಪೊಲೀಸ್ ತಂಡಗಳು ಮತ್ತು ಬಾಂಬ್ ಪತ್ತೆ ಹಾಗೂ ವಿಲೇವಾರಿ ತಂಡಗಳು (ಬಿಡಿಡಿಎಸ್) ತಡರಾತ್ರಿ ಬಂದ ಈ ಕರೆ ಹಿನ್ನೆಲೆ ಕಚೇರಿಯಲ್ಲಿ ಶೋಧ ಕಾರ್ಯ ನಡೆಸಿದ್ದು, ಬಾಂಬ್‌ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಈ ಹಿನ್ನೆಲೆ ಗೂಗಲ್‌ ಕಚೇರಿಯಲ್ಲಿ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಗೂಗಲ್‌ ಕಚೇರಿಗೆ   ಭಾನುವಾರ ರಾತ್ರಿ 7.54ಕ್ಕೆ ಕರೆ ಬಂದಿದ್ದು, ಕಂಪನಿಯ ಪುಣೆಯ  ಕಚೇರಿಯಲ್ಲಿ ಬಾಂಬ್‌ ಇಡಲಾಗಿದೆ. ಮುಂಧ್ವಾ ಪ್ರದೇಶದಲ್ಲಿರುವ ಬಹು ಮಹಡಿ ಕಮರ್ಷಿಯಲ್‌ ಕಟ್ಟಡದಲ್ಲಿರುವ ಈ ಕಚೇರಿಯ 11ನೇ ಮಹಡಿಯಲ್ಲಿ ಬಾಂಬ್ ಇಡಲಾಗಿದೆ ಎಂದು ಬೆದರಿಕೆ ಕರೆ ಬಂದಿದೆ ಎಂದು ಅಧಿಕಾರಿಯೊಬ್ಬರು  ಸುದ್ದಿಸಂಸ್ಥೆ ಪಿಟಿಐಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

error: Content is protected !!

Join the Group

Join WhatsApp Group