ಗಂಡನ ಕೊಲೆಗೆ ಸುಫಾರಿ ಕೊಟ್ಟ ಹೆಂಡತಿ!!   ➤ ಮೂವರ ಬಂಧನ

(ನ್ಯೂಸ್ ಕಡಬ)newskadaba.com ಕುಣಿಗಲ್, ಫೆ.13. ಗಂಡನ ಕೊಲೆಗೆ ಸುಫಾರಿ‌ ನೀಡಿದ್ದಕ್ಕೆ ಓರ್ವ ಮಹಿಳೆ ಸೇರಿದಂತೆ ಮೂರು ಮಂದಿಯನ್ನು ಕುಣಿಗಲ್ ಪೊಲೀಸರು ಬಂಧಿಸಿದ್ದಾರೆ.

ಸೀನಪ್ಪನಹಳ್ಳಿ ಗ್ರಾಮದ ಮಂಜುನಾಥ್ ಎಂಬವರ ಕೊಲೆಗೆ ಸಂಬಂಧಿಸಿದಂತೆ ಅತನ‌ ಹೆಂಡತಿ ಹರ್ಷಿತಾ (20) ಹಾಗೂ ಆಕೆಯ ಚಿಕ್ಕಮ್ಮನ ಮಗ ರಘು, ರವಿಕಿರಣ್ ಬಂಧಿತ ಆರೋಪಿಗಳು.

ಕುಣಿಗಲ್ ಪಟ್ಟಣದಲ್ಲಿ ಮಂಜುನಾಥ್ ತನ್ನ ಸ್ನೇಹಿತರೊಂದಿಗೆ ಹುಟ್ಟುಹಬ್ಬ ಆಚರಿಸಿ ಸೀನಪ್ಪಮಹಳ್ಳಿ ಗ್ರಾಮದ ತನ್ನ ಸ್ವಂತ ಮನೆಗೆ ಬಂದಿದ್ದಾನೆ. ನಂತರ ಮಧ್ಯರಾತ್ರಿ ಸುಮಾರು 12 ಗಂಟೆಗೆ ಆತನಿಗೆ ಕರೆ ಬಂದಿದ್ದಕ್ಕಾಗಿ ಎದ್ದು ಹೊರ ಹೋಗಿದ್ದು, ಮತ್ತೇ ಆತ ಮನೆಗೆ ವಾಪಸ್ಸಾಗಿಲ್ಲ. ಊರಿನಿಂದ ಒಂದು ಕಿ.ಮೀ ದೂರದಲ್ಲಿ ಇರುವ ಕಿತ್ನಾಮಂಗಲ ಕೆರೆಯಲ್ಲಿ ಆತನ ಶವ ಪತ್ತೆಯಾಗಿದೆ.

Also Read  ಅಬಕಾರಿ ಇಲಾಖೆಯ ಪುತ್ತೂರು ಹಾಗೂ ಬಂಟ್ವಾಳ ಉಪ ವಿಭಾಗ ► ನ.27 ಮತ್ತು 28 ರಂದು ಮುಟ್ಟುಗೋಲು ವಾಹನಗಳ ಹರಾಜು

 

error: Content is protected !!
Scroll to Top