(ನ್ಯೂಸ್ ಕಡಬ) newskadaba.com ಟರ್ಕಿ, ಫೆ.13. ಟರ್ಕಿಯಲ್ಲಿ ಉಂಟಾದ ಭೂಕಂಪದಲ್ಲಿ ಓರ್ವ ಬೆಂಗಳೂರಿನ ವ್ಯಕ್ತಿ ಕಾಣೆಯಾಗಿದ್ದಾನೆ ಎಂದು ವರದಿಯಾಗಿತ್ತು. ಇದೀಗ ಆ ವ್ಯಕ್ತಿಯ ಶವ ಪತ್ತೆಯಾಗಿದೆ.ಬೆಂಗಳೂರಿನ ನಿವಾಸಿ, ಟೆಕ್ಕಿ ವಿಜಯ್ ಕುಮಾರ್ ಭೂಕಂಪದಲ್ಲಿ ಸಿಲುಕಿ ನಾಪತ್ತೆಯಾಗಿದ್ದರು ಎಂದು ವರದಿ ತಿಳಿಸಿದೆ.
ವಿಜಯ್ ಕುಮಾರ್ ಟರ್ಕಿಯ ಮಾಲತ್ಯ ನಗರದ ಹೋಟೆಲ್ನ 24 ಅಂತಸ್ತಿನ ಹೋಟೆಲ್ನ 2ನೇ ಮಹಡಿಯಲ್ಲಿ ತಂಗಿದ್ದರು. ಭೂಕಂಪನದ ನಂತರ ಹೋಟೆಲ್ ಸಂಪೂರ್ಣ ಕುಸಿದಿತ್ತು. ವಿಜಯ್ ಕುಮಾರ್ ನಾಪತ್ತೆಯಾಗಿದ್ದರು. ಆದರೆ ಅವಶೇಷಗಳ ತೆರವು ಕಾರ್ಯಾಚರಣೆ ವೇಳೆ ಟೆಕ್ಕಿಯ ಪಾಸ್‌ಪೋರ್ಟ್ ಹಾಗೂ ಇತರೆ ವಸ್ತುಗಳು ಪತ್ತೆಯಾಗಿದ್ದವು. ಈಗ ವಿಜಯ ಕುಮಾರ್ ಶವ ಪತ್ತೆಯಾಗಿದೆ ಎಂದು ಟರ್ಕಿಯ ಅಂಕಾರಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಕೈಯಲ್ಲಿದ್ದ ಟ್ಯಾಟೊ ಮೂಲಕ ಮೃತದೇಹ ಪತ್ತೆಯಾಗಿದೆ. ಉತ್ತರಾಖಂಡ್‌ನಲ್ಲಿರುವ ಕುಟುಂಬ ಸದಸ್ಯರು ವಿಜಯ ಕುಮಾರ್ನನ್ನು ಗುರುತಿಸಲು ಟೆಕ್ಕಿಯ ಎಡಗೈಯಲ್ಲಿದ್ದ ಟ್ಯಾಟೋ ಫೋಟೋ ಕಳುಹಿಸಿದ್ದರು. ಈ ಗುರುತಿನ ಮೂಲಕ ವಿಜಯ ಕುಮಾರ್ ಪತ್ತೆಯಾಗಿದ್ದಾರೆ. ದುರಾದೃಷ್ಟವಶಾತ್ ಅವರು ಮೃತಪಟ್ಟಿದ್ದಾರೆ. ವಿಜಯ್ ಕುಮಾರ್ಗೆ ಪತ್ನಿ ಹಾಗೂ ಇಬ್ಬರು ಚಿಕ್ಕ ಮಕ್ಕಳಿದ್ದಾರೆ.