(ನ್ಯೂಸ್ ಕಡಬ) newskadaba.com. ಬೆಂಗಳೂರು. ಫೆ.13 ರಾಜ್ಯದ ವಿದ್ಯುತ್ ವಿತರಣಾ ಕಂಪೆನಿಗಳು ವಿದ್ಯುತ್ ದರ ಪರಿಷ್ಕರಣೆ ಕೋರಿರುವ ಹಿನ್ನೆಲೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಫೆಬ್ರವರಿ 13 ರಿಂದ ಮಾರ್ಚ್ 1ರ ವರೆಗೆ ಸಾರ್ವಜನಿಕ ಆದಾಲತ್ ನಡೆಸಲಿದೆ.
ಹೀಗಾಗಿ ವಿದ್ಯುತ್ ದರದಲ್ಲಿ ಭಾರೀ ಏರಿಕೆಯಾಗುವ ಸಾಧ್ಯತೆ ಇದೆ. ಕರೆಂಟ್ ಬಿಲ್ ಹೆಚ್ಚಾದ್ರೆ ಸಾರ್ವಜನಿಕ ವಲಯದಲ್ಲಿ ಆತಂಕ ಹೆಚ್ಚಿದ್ದು, ಹೋಟೆಲ್ ಉದ್ಯಮಗಳು ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿವೆ. ಈ ಬಗ್ಗೆ ಬೃಹತ್ ಬೆಂಗಳೂರು ಹೋಟೆಲ್ ಅಸೋಸಿಯೇಶನ್ ಅಧ್ಯಕ್ಷ ಪಿ.ಸಿ. ರಾವ್ ಪ್ರತಿಕ್ರಿಯಿಸಿದ್ದು, ಇದೊಂದು ಕೆಟ್ಟ ನಿರ್ಣಯ. ಗ್ರಾಹಕರ ಮೇಲೆ ಹೊರೆ ಹಾಕೋದು ಸಮಂಜಸವಲ್ಲ ಎಂದು ಕಿಡಿಕಾರಿದ್ದಾರೆ.