ಅಮ್ಮನ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಸೇಡು ತೀರಿಸಿಕೊಂಡ ಮಗ

(ನ್ಯೂಸ್ ಕಡಬ) newskadaba.com ಪುಣೆ, ಫೆ.13.ಕೆಳವು ವರ್ಷಗಳ ಹಿಂದೆ ಅಮ್ಮನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ವ್ಯಕ್ತಿ ಹಾಗೂ ಆತನ ಪತ್ನಿಯನ್ನು ಮಹಿಳೆಯ ಪುತ್ರ ಗುದ್ದಲಿಯಿಂದ ಹೊಡೆದು ಕೊಂದ ಘಟನೆ ಮಹಾರಾಷ್ಟ್ರದ ಪುಣೆಯ ದಪೊಡಿ ಎಂಬಲ್ಲಿ ಈ ಘಟನೆ ಸಂಭವಿಸಿದೆ. ಘಟನೆಗೆ ಸಂಬಂಧಿಸಿದಂತೆ 32 ವರ್ಷ ಪ್ರಾಯದ ಪ್ರಸನ್ನ ಮುರುಗುಟ್ಕರ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.  60 ವರ್ಷದ ಶಂಕರ್ ಕಾಟೆ ಹಾಗೂ ಈತನ ಪತ್ನಿ 55 ವರ್ಷದ ಸಂಗೀತಾ ಕೊಲೆಯಾದವರು.

ಪುಣೆಯ ದಪೊಡಿಯಲ್ಲಿರುವ ದಂಪತಿ ವಾಸವಿದ್ದ ಮಹದೇವ್ ಅಲಿ ಹೆಸರಿನ ಮನೆಯಲ್ಲಿಯೇ ಈ ಹತ್ಯೆ ನಡೆದಿದೆ. ಗುದ್ದಲಿ ಹಿಡಿದುಕೊಂಡು ಅವರ ಮನೆಗೆ ಬಂದ ಪ್ರಸನ್ನ ಮನೆಯಲ್ಲಿ ಕುಳಿತಿದ್ದ ದಂಪತಿಗಳಿಬ್ಬರನ್ನು ಗುದ್ದಲಿಯಿಂದ ಹೊಡೆದು ಕೊಲೆ ಮಾಡಿದ್ದಾನೆ. ನಂತರ ರಕ್ತಸಿಕ್ತ ಗುದ್ದಲಿಯನ್ನು ಹಿಡಿದುಕೊಂಡು ಮನೆಯಿಂದ ಹೊರ ನಡೆದಿದ್ದಾನೆ. ಇದನ್ನು ಗಮನಿಸಿದ ಸುತ್ತಮುತ್ತಲಿನ ಜನ ಪೊಲೀಸರಿಗೆ ಮಾಹಿತಿ ನೀಡಿದ್ದಲ್ಲದೇ, ಓಡಲು ಯತ್ನಿಸಿದ್ದ ಪ್ರಸನ್ನನ್ನು ಪೊಲೀಸರು ಬರುವವರೆಗೆ ಗಟ್ಟಿಯಾಗಿ ಹಿಡಿದುಕೊಂಡ ಪೊಲೀಸರಿಗೆ ಒಪ್ಪಿಸಿದ್ದಾರೆ.

Also Read  ಮಂಗಳೂರು: ಸರಕಾರಿ ವಾಹನ ಚಾಲಕರ ಸಂಘದ ಸಭೆ

 

 

error: Content is protected !!
Scroll to Top