ರಾಜ್ಯದ ಜನತೆಗೆ ಮತ್ತೆ ವಿದ್ಯುತ್ ದರ ಏರಿಕೆ ಶಾಕ್ !!    

(ನ್ಯೂಸ್ ಕಡಬ)newskadaba.com ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಗ್ರಾಹಕರ ಕೈ ಸುಡುವಂತಾಗಿದ್ದು, ಇದೀಗ ರಾಜ್ಯದ ಜನರಿಗೆ ಮತ್ತೊಮ್ಮೆ ವಿದ್ಯುತ್ ದರದಲ್ಲಿಯೂ ಭಾರೀ ಏರಿಕೆಯಾಗುವ ಸಾಧ್ಯತೆ ಇದೆ.

ಕೆಲ ತಿಂಗಳ ಹಿಂದೆಯಷ್ಟೇ ಇಂಧನ ಹೊಂದಾಣಿಕೆಯ ಶುಲ್ಕವನ್ನು ಪರಿಷ್ಕರಿಸಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಆದೇಶ ಹೊರಡಿಸಿತ್ತು. ಇದೀಗ ಮತ್ತೆ ರಾಜ್ಯದ ವಿದ್ಯುತ್ ವಿತರಣಾ ಕಂಪನಿಗಳು ವಿದ್ಯುತ್ ದರ ಪರಿಷ್ಕರಣೆ ಕೋರಿರುವ ಹಿನ್ನೆಲೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಫೆಬ್ರವರಿ 13 ರಿಂದ ಮಾರ್ಚ್ 1ರವರೆಗೆ ಸಾರ್ವಜನಿಕ ಆದಾಲತ್ ನಡೆಸಲಿದೆ.

Also Read  ಪಡುಬಿದ್ರೆ: ನಿಂತಿದ್ದ ಲಾರಿಗೆ ಟೆಂಪೊ ಢಿಕ್ಕಿ ► ಓರ್ವ ಮೃತ್ಯು, ಮೂವರು ಗಂಭೀರ

 

error: Content is protected !!
Scroll to Top