ಕಟ್ಟಡದ ಅವಶೇಷಗಳಡಿ ಪತ್ತೆಯಾಗಿದ್ದ ನವಜಾತ ಶಿಶುವನ್ನು ದತ್ತು ಪಡೆಯಲು ಮುಗಿಬಿದ್ದ ಜನ!

(ನ್ಯೂಸ್ ಕಡಬ) newskadaba.comಸಿರಿಯಾ, ಫೆ.13. ವಾಯುವ್ಯ ಸಿರಿಯಾದಲ್ಲಿ ಭೂಕಂಪನಕ್ಕೆ ಕುಸಿದ ಕಟ್ಟಡದ ಅವಶೇಷಗಳ ಅಡಿಯಲ್ಲಿ ಮಗುವಿಗೆ ಜನ್ಮ‌ನೀಡಿ ತಾಯಿ ಮೃತಪಟ್ಟಿದ್ದಾರೆ.

ಸಿರಿಯಾದ ಜಿಂದಾಯ್ರಿಸ್ ಪಟ್ಟಣದಲ್ಲಿ ಕಾರ್ಯಾಚರಣೆ ವೇಳೆ ಕಟ್ಟಡದ ಅವಶೇಷಗಳಡಿಯಲ್ಲಿ ಈ ನವಜಾತ ಶಿಶು ಪತ್ತೆಯಾಗಿತ್ತು.ಆ ಮಗು ಪತ್ತೆಯಾದಾಗ ಅದರ ಹೊಕ್ಕಳ ಬಳ್ಳಿ ಕೂಡ ತಾಯಿಯಿಂದ ಬೇರ್ಪಟ್ಟಿರಲಿಲ್ಲ.ಇದರಿಂದಾಗಿ ಭೂಕಂಪದ ಅವಶೇಷಗಳಲ್ಲಿ ರಕ್ಷಿಸಲ್ಪಟ್ಟ ಈ ಮಗುವಿಗೆ ಅಯಾ ಎಂದು ಹೆಸರು ಇಡಲಾಗಿದೆ.

ಭೂಕಂಪನದಲ್ಲಿ ಶಿಶುವಿನ ತಾಯಿ, ತಂದೆ ಮತ್ತು ಆಕೆಯ ನಾಲ್ವರು ಒಡಹುಟ್ಟಿದವರು ಮೃತಪಟ್ಟಿದ್ದಾರೆ.ಮಗುವನ್ನು ಇದೀಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಇದರ ಬೆನ್ನಲ್ಲೇ ಜಗತ್ತಿನಾದ್ಯಂತ ಹಲವರು‌ ಮಗುವನ್ನು ದತ್ತು ಪಡೆದುಕೊಳ್ಳಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.

Also Read  ಇಂದಿನಿಂದ ಫೆಬ್ರವರಿ 19ರ ವರೆಗೆ ಕಡಬದಲ್ಲಿ ದ್ವಾದಶ ಜ್ಯೋತಿರ್ಲಿಂಗ ದರ್ಶನ ➤ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ನೇತೃತ್ವ

 

error: Content is protected !!
Scroll to Top