(ನ್ಯೂಸ್ ಕಡಬ)newskadaba.com ಭಟ್ಕಳ, ಫೆ.13. ಮೀನುಗಾರಿಕೆಯಲ್ಲಿ ನಿರತ ವೇಳೆ ಆಕಸ್ಮಿಕವಾಗಿ ಆಯತಪ್ಪಿ ಬೋಟಿನ ಬಲೆ ಎಳೆಯುವ ಡ್ರಮ್ ವಿಂಚ್ ಮೇಲೆ ಬಿದ್ದ ಪರಿಣಾಮ ಮೀನುಗಾರ ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಭಟ್ಕಳದ ಬೈಲೂರಿನ ಬಾವಿಹಿತ್ಲು ನಿವಾಸಿ ನಾಗರಾಜನ್(27) ಎಂದು ಗುರುತಿಸಲಾಗಿದೆ. ನಾಗರಾಜನ್ ಮಲ್ಪೆ ಬಂದರಿನಲ್ಲಿ ಪ್ರತಾಪ್ ಸುವರ್ಣ ಮಾಲೀಕತ್ವದ ಶ್ರೀಕೃಷ್ಣ ಚಕ್ರ ಲೈಲ್ಯಾಂಡ್ ಮೀನುಗಾರಿಕಾ ಬೋಟ್ ನಲ್ಲಿ ಕಲಾಸಿಯಾಗಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದರು.
