ಬಾಟಲಿಯಲ್ಲಿ ನೀರು ಕುಡಿದಿದ್ದಕ್ಕೆ ಶಾಲೆಯ ಪ್ರಾಂಶುಪಾಲರಿಂದ ದಲಿತ ವಿದ್ಯಾರ್ಥಿಗೆ ಥಳಿತ

(ನ್ಯೂಸ್ ಕಡಬ) newskadaba.com ಬಿಜ್ನೋರ್, ಫೆ.13. ಪ್ರಥಮ ಪಿಯುಸಿ ವಿದ್ಯಾರ್ಥಿಯೊಬ್ಬ ಮೇಜಿನ ಮೇಲೆ ಇಟ್ಟಿದ್ದ ಬಾಟಲಿಯಿಂದ ನೀರು ಕುಡಿದ ಕಾರಣಕ್ಕೆ ಆತನ ಶಾಲೆಯ ಪ್ರಾಂಶುಪಾಲರು ಥಳಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದಲಿತ ವಿದ್ಯಾರ್ಥಿ ನೀಡಿದ ದೂರಿನ ಪ್ರಕಾರ, ನಡೆದ ದ್ವೀತಿಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಈ ಘಟನೆ ಸಂಭವಿಸಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಅರ್ಜ್ ತಿಳಿಸಿದ್ದಾರೆ. ವಿದ್ಯಾರ್ಥಿಯು ಮೇಜಿನ ಮೇಲೆ ಇಟ್ಟಿದ್ದ ಬಾಟಲಿಯಿಂದ ನೀರು ಕುಡಿದನು. ನಂತರ ಪ್ರಾಂಶುಪಾಲ ಯೋಗೇಂದ್ರ ಕುಮಾರ್ ಮತ್ತು ಇತರರು ಆತನ ಮೇಲೆ ಹಲ್ಲೆ ನಡೆಸಿ, ನಿಂದಿಸಿದ್ದಾರೆ ಎಂದು ಅರ್ಜ್ ಹೇಳಿದ್ದಾರೆ. ಈ ಕಾರಣಕ್ಕೆ ಪ್ರಾಂಶುಪಾಲರು ಸೇರಿದಂತೆ ಏಳು ಮಂದಿಯ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ  ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಈ ಸಂಬಂಧವಾಗಿ ಸರ್ಕಲ್ ಅಧಿಕಾರಿಯಿಂದ ತನಿಖೆ ನಡೆಸಲಾಗುತ್ತಿದೆ ಎಂದು  ಹೇಳಿದ್ದಾರೆ.

Also Read  ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ಸುದರ್ಶನ ಹೋಮ

 

 

 

 

error: Content is protected !!
Scroll to Top