(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.26. ನಿಷೇಧಿತ ಮಾದಕ ವಸ್ತುಗಳಾದ ಎಲ್ಎಸ್ಡಿ, ಎಂ.ಡಿ ಎಂ.ಎ ಮತ್ತು ಎಂಡಿಎಂ ಟ್ಯಾಬ್ಲೆಟ್ಗಳನ್ನು ನಗರದಲ್ಲಿ ಮಾರಾಟ ಮಾಡುತ್ತಿದ್ದ ಅಂತಾರಾಜ್ಯ ಜಾಲವನ್ನು ಭೇದಿಸಿರುವ ಮಂಗಳೂರು ದಕ್ಷಿಣ ರೌಡಿ ನಿಗ್ರಹ ದಳ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಮಂಗಳೂರು ನಗರದಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಬಂದ ಖಚಿತ ಮಾಹಿತಿಯಂತೆ ನಿಖಿಲ್ ಕೆ.ಬಿ., ಶ್ರವಣ ಪೂಜಾರಿ, ರೋಶನ್ ವೇಗಸ್, ಬಾಶೀಂ ಬಶೀರ್ ಎಂಬವರನ್ನು ಬಂಧಿಸಲಾಗಿತ್ತು. ಬಂಧಿತರು ನೀಡಿದ ಮಾಹಿತಿಯನ್ವಯ ಪ್ರಧಾನ ಆರೋಪಿಗಳಾದ ಹಂಪನಕಟ್ಟೆಯ ಕಾರ್ಲ್ ಡಿಕುನ್ಹ ಯಾನೆ ಆಸ್ಟಿನ್(29) ಹಾಗೂ ಕುಲಶೇಖರ ಸಿಲ್ವರ್ ಗೇಟ್ ನ ಅನೂಪ್ ಡಿ ಅಲ್ಮೇಡಾ (26) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ ಎಂ ಡಿ ಎಂ ಪೀಲ್ಸ್ -93, ಹುಂಡೈ ಇಯಾನ್ ಕಾರು-1, ಮೊಬೈಲ್ ಪೋನ್-3 ಹಾಗೂ 30,850 ನಗದು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಳ್ಳಲಾದ ಸೊತ್ತುಗಳ ಮೌಲ್ಯ 2,36,000ರೂ. ಎಂದು ಅಂದಾಜಿಸಲಾಗಿದೆ.