(ನ್ಯೂಸ್ ಕಡಬ)newskadaba.com ಹೊನ್ನಾವರ, ಫೆ.13. ಮನೆಯ ತೋಟದ ಸಮೀಪ ನಾಯಿಯೊಂದಿಗೆ ಆಟ ಆಡುತ್ತಾ ತೆರಳಿದ ಬಾಲಕನೋರ್ವ ಆಯತಪ್ಪಿ ಬಾವಿಗೆ ಬಿದ್ದು ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ.
ತಾಲೂಕಿನ ಕಡ್ಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಂದೂರಿನ ನಾಗಭೂಷಣ ದಯಾನಂದ ಹೆಗಡೆ (6) ಎನ್ನುವ ಒಂದನೇ ತರಗತಿ ವಿದ್ಯಾರ್ಥಿ ಆಕಸ್ಮಿಕವಾಗಿ ತೆರೆದ ಬಾವಿಯಲ್ಲಿ ಬಿದ್ದಿದ್ದಾನೆ. ಮಗುವನ್ನು ಕುಟುಂಬದವರು ತೋಟದಲ್ಲಿ ಹುಡುಕಿ ಬಾವಿಯ ಕಡೆ ನೋಡಿದಾಗ ದುರಂತ ಬೆಳಕಿಗೆ ಬಂದಿದೆ.