ಕೋಲ್ಕತಾ ಥಂಡರ್ ಬೋಲ್ಟ್ಸ್ ಗೆ ಹ್ಯಾಟ್ರಿಕ್ ಗೆಲುವು

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.13. ಬೆಂಗಳೂರಿನ ಕೋರಮಂಗಲ ಕ್ರೀಡಾಂಗಣದಲ್ಲಿ ನಡೆದ ಪ್ರೈಮ್ ವಾಲಿಬಾಲ್ ಲೀಗ್ ಎರಡನೇ ಆವೃತ್ತಿಯಲ್ಲಿ ಕೋಲ್ಕತಾ ಥಂಡರ್ ಬೋಲ್ಟ್ಸ್ ತಂಡ, ಕೊಚ್ಚಿ ಬ್ಲೂ ಸ್ಪೈಕರ್ಸ್ ತಂಡವನ್ನು 15-9, 15-11, 15-14, 15-11, 12-15 ಸೆಟ್ ಗಳಿಂದ ಸೋಲಿಸಿ ಸತತ ಮೂರನೇ ಗೆಲುವು ದಾಖಲಿಸಿದೆ. ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ರಾಹುಲ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಕೋಲ್ಕತಾ ಥಂಡರ್ ಬೋಲ್ಟ್ಸ್ ತಂಡ ಅಶ್ವಲ್ ರಾಯ್ ಮತ್ತು ದೀಪೇಶ್ ಕುಮಾರ್ ಸಿನ್ಹಾ ಅವರ ತರಬೇತಿಯಿಂದ ಉತ್ತಮ ಪ್ರದರ್ಶನ ನೀಡಿತು. ಕೊಚ್ಚಿಯ ರಕ್ಷಣಾ ವಿಭಾಗ ಹೆಣಗಾಡುತ್ತಿರುವಾಗ, ವಿನೀತ್ ಕುಮಾರ್ ಮತ್ತು ರಾಹುಲ್ ಅದನ್ನು ಹೆಚ್ಚು ಬಳಸಿಕೊಂಡರು ಮತ್ತು ಶಕ್ತಿಯುತ ಸ್ಪೈಕ್ ಗಳನ್ನು ಮಾಡಲು ಪ್ರಾರಂಭಿಸಿದರು ಎಂದು ವರದಿ ತಿಳಿಸಿದೆ.

Also Read  ಸರಕಾರಿ ಬಸ್ ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ! ➤ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಘೋಷಣೆ

 

 

 

error: Content is protected !!
Scroll to Top