ಯಶಸ್ವಿನಿ ಕಾರ್ಡ್‌ ಇಲ್ಲದೇ ಪರದಾಟ !! ➤ ನೋಂದಣಿಯಾದರೂ ಸಿಗುತ್ತಿಲ್ಲ ಕಾರ್ಡ್.!

(ನ್ಯೂಸ್ ಕಡಬ)newskadaba.com ಮೈಸೂರು, ಫೆ.13. ರಾಜ್ಯಾದ್ಯಂತ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಗೆ ಸರಾಗವಾಗಿ ನೋಂದಣಿ ನಡೆಯುತ್ತಿದೆ. ಆದರೆ, ತಾಂತ್ರಿಕ ಹಾಗೂ ಆಡಳಿತಾತ್ಮಕ ಕಾರಣಗಳಿಂದಾಗಿ ಕಾರ್ಡ್‌ ವಿತರಣೆ ವಿಳಂಬವಾಗುತ್ತಿರುವುದು ಜನರಲ್ಲಿ ಬೇಸರ ಮೂಡಿಸಿದೆ.


ಎಲ್ಲಾ ಜಿಲ್ಲೆಗಳ ಸಹಕಾರ ಇಲಾಖೆ ಕಚೇರಿಗಳಲ್ಲಿ ಯಶಸ್ವಿನಿ ಯೋಜನೆಗೆ ನೋಂದಣಿ ಮಾಡಿಕೊಳ್ಳಲಾಗುತ್ತಿದೆ. ನವೆಂಬರ್‌ನಿಂದ ನೋಂದಣಿ ಆರಂಭವಾಗಿದೆ. ಮೈಸೂರು ಜಿಲ್ಲೆಯಾದ್ಯಂತ 2381 ಸಹಕಾರ ಸಂಘಗಳಿದ್ದು, ಅಂದಾಜು 3 ಲಕ್ಷ ಫಲಾನುಭವಿಗಳಿದ್ದಾರೆ. ಇವರಲ್ಲಿ 60,000 ಸದಸ್ಯರಿಂದ ಅರ್ಜಿಗಳು ಬಂದಿವೆ. ಅರ್ಜಿದಾರರ ಅವಲಂಬಿತರಿಂದ 1,72,814 ಫಲಾನುಭವಿಗಳ ಹೆಸರು ನೋಂದಣಿ ಮಾಡಿಕೊಳ್ಳಲಾಗಿದೆ. ಇವುಗಳ ಪೈಕಿ ಅಂದಾಜು 2000 ಕಾರ್ಡ್‌ಗಳು ಮಾತ್ರ ವಿತರಣೆಯಾಗಿವೆ.

Also Read  ಪತ್ನಿ ಜೊತೆ ರಿಯಲ್‌ ಎಸ್ಟೇಟ್‌ ಉದ್ಯಮಿ ಆತ್ಮಹತ್ಯೆಗೆ ಶರಣು..!

 

error: Content is protected !!
Scroll to Top