ಬಂಧನದ ಭೀತಿಯಿಂದ ನವವಿವಾಹಿತೆ ಯುವತಿ ಆತ್ಮಹತ್ಯೆ!

(ನ್ಯೂಸ್ ಕಡಬ) newskadaba.com ದಿಸ್ಪುರ್, ಫೆ.13. ತನ್ನ ಗಂಡನನ್ನು ಬಂಧಿಸುತ್ತಾರೆಂದು ಹೆದರಿ ಮೂರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ನವವಿವಾಹಿತೆ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ. ದಕ್ಷಿಣ ಸಾಲ್ಮರ ಪೊಲೀಸ್ ಠಾಣಾ ವ್ಯಾಪ್ತಿಯ ಕಮರ್ ಪದ ಗ್ರಾಮದ ನಿವಾಸಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡವರು.

ಅಸ್ಸಾಂ ಸರ್ಕಾರ ಬಾಲ್ಯವಿವಾಹ ವಿರುದ್ಧ ಕಾರ್ಯಾಚರಣೆ ನಡೆಸಿ ಸಾವಿರಾರು ಮಂದಿಯನ್ನು ಬಂಧಿಸಿದ್ದರು.ಈ  ಕುರಿತು ತನ್ನ ಪತಿಯನ್ನು ಬಂಧಿಸುತ್ತಾರೆ ಎಂದು ಹೆದರಿ 3 ತಿಂಗಳ ಹಿಂದೆಯಷ್ಟೇ ಮದುವೆಯಾದ ವಿವಾಹಿತೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮೃತದೇಹವನ್ನು ಇದೀಗ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.ಈ ಹಿನ್ನಲೆಯಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ.

Also Read  ಮಹಾತ್ಮ ಗಾಂಧೀಜಿ ಮರಿಮೊಮ್ಮಗ ಕೊರೊನಾಗೆ ಬಲಿ

error: Content is protected !!
Scroll to Top