ನಿಮ್ಮ ಬೈಕಿನ ನಂಬರ್ ಪ್ಲೇಟ್ ನಲ್ಲಿ ಹೆಸರುಗಳಿವೆಯೇ…? ► ಪೊಲೀಸರು ದಂಡ ವಿಧಿಸುವುದಕ್ಕಿಂತ ಮೊದಲು ಎಚ್ಚೆತ್ತುಕೊಳ್ಳಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ.26. ಸಂಚಾರಿ ನಿಯಮವನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಮತ್ತು ಬೈಕ್ ಸವಾರರು ಹೆಲ್ಮೆಟ್ ಧರಿಸಿ, ಕಾರ್ ಚಾಲಕರು ಸೀಟ್‌‌ ಬೆಲ್ಟ್ ಧರಿಸಿ ಓಡಾಡುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿರುವ ಪೊಲೀಸರು ಇದೀಗ ವಾಹನಗಳ ನಂಬರ್ ಪ್ಲೇಟ್‌‌ಗಳ ಬಗ್ಗೆ ತೀವ್ರ ನಿಗಾ ವಹಿಸುತ್ತಿದ್ದಾರೆ.

ನಿಯಮಾನುಸಾರ ಬೈಕ್ ಅಥವಾ ಯಾವುದೇ ವಾಹನದ ನಂಬರ್‌ ಪ್ಲೇಟ್ ಮೇಲೆ ಆರ್‌ಟಿಓ ನೀಡಿರುವ ನಂಬರ್ ಹೊರತಾಗಿ ಮತ್ತೇನು ಬರೆಸುವಂತಿಲ್ಲ. ಆದರೆ ಜಿಲ್ಲೆಯ ಬಹುತೇಕ ಬೈಕ್‌ಗಳ ನಂಬರ್ ಪ್ಲೇಟ್‌‌ ಮೇಲೆ ನಿಯಮ ಉಲ್ಲಂಘಿಸುವಂತಹ ದೃಶ್ಯಗಳು ಕಂಡುಬರುತ್ತಿವೆ. ವಿವಿಧ ರೀತಿಯ ಹೆಸರು, ವಿವಿಧ ವಿನ್ಯಾಸದಲ್ಲಿ ಬರೆದಿರುವ ನಂಬರ್ ಗಳು ತಟ್ಟನೆ ಓದಲು ಕಷ್ಟವಾಗುತ್ತವೆ. ಇವೆಲ್ಲವುಗಳನ್ನು ಕಿತ್ತೆಸೆಯುತ್ತಿರುವ ಪೊಲೀಸರು ದಂಡ ವಿಧಿಸುತ್ತಿದ್ದಾರೆ.

Also Read  ಕಾಡಾನೆ ದಾಳಿಯಿಂದ ಗಾಯಗೊಂಡಿದ್ದ ವ್ಯಕ್ತಿ ಮೃತ್ಯು..!

ಈ ಬಗ್ಗೆ ಕಲಬುರಗಿಯಲ್ಲಿ ಕಾರ್ಯಾಚರಣೆ ನಡೆಸಿರುವ ಪೊಲೀಸರು ಹಲವು ವಾಹನಗಳನ್ನು ವಶಪಡಿಸಿಕೊಂಡು ದಂಡ ವಿಧಿಸಿದ್ದಾರೆ. ಇನ್ಮುಂದೆ ನಮ್ಮ ಪರಿಸರದಲ್ಲಿಯೂ ಪೊಲೀಸರು ಕಾರ್ಯಾಚರಣೆ ನಡೆಸುವುದಕ್ಕಿಂತ ಮೊದಲು ನಾವು ನಂಬರ್ ಪ್ಲೇಟ್ ಗಳಲ್ಲಿ ಯಾವುದೇ ಹೆಸರನ್ನು ಬರೆಯದೆ ಸುಲಭವಾಗಿ ಕಾಣುವ ಹಾಗೆ ಅಳವಡಿಸುವ ಅಗತ್ಯವಿದೆ.

error: Content is protected !!
Scroll to Top