ನದಿಯಲ್ಲಿ  ಮುಳುಗಿ ಯುವಕನೋರ್ವ ಮೃತ್ಯು

(ನ್ಯೂಸ್ ಕಡಬ) newskadaba.com ಸಿರುಗುಪ್ಪ, ಫೆ.12. ತಾಲೂಕಿನ ಕೆಂಚನಗುಡ್ಡದ ಸಮೀಪದ ಹರಿಯುತ್ತಿರುವ ತುಂಗಭದ್ರಾ ನದಿಯ ನಡುವೆ ಇರುವ ಗಡ್ಡೆ ಖಾದರ್ ಭಾಷ ಉರುಸ್ ಗೆ ಬಂದಿದ್ದ ನಬಿರಸೂಲ್(18) ಎಂಬುವ ಯುವಕ ತುಂಗಭದ್ರಾ ನದಿಯಲ್ಲಿ ಸ್ಥಾನ ಮಾಡಲು ಹೋಗಿ ಕೆಸರಿನಲ್ಲಿ ಸಿಕ್ಕಿಕೊಂಡು ಮೃತ ಪಟ್ಟಿರುವ ಘಟನೆ ಸಂಭವಿಸಿದೆ.


ಮೃತ ವ್ಯಕ್ತಿಯು ಸೀಮಾಂದ್ರ ಪ್ರದೇಶದ ರಾಯದುರ್ಗ ತಾಲೂಕಿನ ಬಿ.ಹಿರೇಹಾಳ್ ಗ್ರಾಮದವನೆಂದು ಪತ್ತೆ ಹಚ್ಚಲಾಗಿದೆ
ಈ ಬಗ್ಗೆ ತೆಕ್ಕಲಕೋಟೆ ಪೋಲಿಸ್ ಠಾಣೆಯಲ್ಲಿ ಪ್ರಕಾರಣ ದಾಖಲಾಗಿದೆ ಎಂದು  ವರದಿ ತಿಳಿದು ಬಂದಿದೆ.

Also Read  ಪಟಾಕಿ ಮದ್ದು ಸೇವಿಸಿ ಬಾಲಕ ಮೃತ್ಯು.!

 

error: Content is protected !!
Scroll to Top