(ನ್ಯೂಸ್ ಕಡಬ) newskadaba.com ಧಾರವಾಡ, ಫೆ.12. ಕುಂದಗೋಳ ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ಸರಿ ಸುಮಾರು ಎಂಬತ್ತು ಮಂದಿ ಪ್ರಾಣಿ ಕಚ್ಚಿದ್ದು, ಗಾಯಗೊಂಡವರೆಲ್ಲಾ ಓಡೋಡಿ ಕುಂದಗೋಳ ತಾಲೂಕು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಾನುವಾರುಗಳಿಗೂ ಪ್ರಾಣಿ ಕಚ್ಚಿ ಗಾಯಪಡಿಸಿದ ಪರಿಣಾಮ ರೈತರು ಜಾನುವಾರುಗಳನ್ನು ಪಶು ಆಸ್ಪತ್ರೆಗೆ ಚಿಕಿತ್ಸೆಗಾಗಿ ತಂದು ರೋಧನೆ ಪಡುತ್ತಿದ್ದಾರೆ ಎನ್ನಲಾಗಿದೆ.
ಆ ಪ್ರಾಣಿ ತೋಳವೋ, ಹುಚ್ಚು ಹಿಡಿದ ನರಿಯೋ, ನಾಯಿಯೋ ಗೊತ್ತಿಲ್ಲಾ, ಆದ್ರೇ ಏಕಾಏಕಿ ಕುಂದಗೋಳ ತಾಲೂಕಿನ ಬೆನಕನಹಳ್ಳಿ ಗ್ರಾಮಕ್ಕೆ ನಸುಕಿನ ಜಾವ ನುಗ್ಗಿದ ಪ್ರಾಣಿ ಸಿಕ್ಕ ಸಿಕ್ಕವರನ್ನು ಕಚ್ಚಿ ರಕ್ತದ ರುಚಿ ನೋಡಿದೆ. ದಾಳಿ ಮಾಡಿದ ಪ್ರಾಣಿ ನಾಯಿಯ ಆಕಾರವೇ ಹೊಂದಿದ್ದರೂ ದೊಡ್ಡ ದೇಹವನ್ನು ಹೊಂದಿತ್ತು. ಹೀಗಾಗಿ ತೋಳ ಇರಬಹುದು’ ಎಂದು ಗಾಯಾಳುಗಳು ಹೇಳಿದರು. ಈ ಸಂಭಂದವಾಗಿ ಪ್ರತಿಕ್ರಿಯಿಸಿದ ಹುಬ್ಬಳ್ಳಿ ವಲಯ ಅರಣ್ಯಾಧಿಕಾರಿ ರಮೇಶ ಪೂಜಾರ ಅವರು ದಾಳಿ ಮಾಡಿದ ನಾಯಿ ಚರ್ಮ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ ಅದರ ಮೈಮೇಲೆ ರೋಮಗಳು ಇರಲಿಲ್ಲ ಗ್ರಾಮಸ್ಥರೇ ಹೇಳಿದ್ದಾರೆ. ಹೀಗಾಗಿ ಇದು ನಾಯಿಯ ದಾಳಿ ಎಂದು ಅಂದಾಜಿಸಲಾಗಿದೆ. ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದರು.