ಆಕಸ್ಮಿಕವಾಗಿ ನೀರಿಗೆ ಬಿದ್ದು ಬಾಲಕಿ ಮೃತ್ಯು ➤ಪರಿಹಾರದ ಹಣಕ್ಕಾಗಿ ‘ಹೆತ್ತ’ ಹಾಗೂ ‘ದತ್ತು’ ಪೋಷಕರ ನಡುವೆ ಪೈಪೋಟಿ!

(ನ್ಯೂಸ್ ಕಡಬ) newskadaba.com ಭುವನೇಶ್ವರ್, ಫೆ.12. ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟಿದ್ದ ಬಾಲಕಿಗೆ ಸರಕಾರ ನೀಡಿದ ಪರಿಹಾರದ ಹಣಕ್ಕಾಗಿ ಹೆತ್ತವರು ಹಾಗೂ ಆ ಮಗುವನ್ನು ದತ್ತು ಪಡೆದ ಪೋಷಕರ ನಡುವೆ ಹಗ್ಗ ಜಗ್ಗಾಟ ನಡೆದಿರುವ ಘಟನೆ ಒಡಿಶಾದಲ್ಲಿ ಬೆಳಕಿಗೆ ಬಂದಿದೆ. ಮೂರು ತಿಂಗಳ ಹಿಂದೆ 16 ವರ್ಷದ ನಮಿತಾ ಆಕಸ್ಮಿಕವಾಗಿ ನೀರಿನ ತೊಟ್ಟಿಗೆ ಬಿದ್ದು ಮೃತಪಟ್ಟಿದ್ದಳು.

ಮೃತ ಬಾಲಕಿಯ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರವನ್ನು ಸರಕಾರ ಘೋಷಣೆ ಮಾಡಿತ್ತು. ಒಸ್ತಿಯಾ ಗ್ರಾಮದ ನಿವಾಸಿಯಾಗಿದ್ದ ನಮಿತಾಗೆ ಜನ್ಮ ನೀಡಿದ ಹೆತ್ತವರಾದ ರಂಜನ್‌ ಹಾಗೂ ರೂಪಾಲಿ ಮಾಯ್‌ ಹಾಗೂ ಗೋಪಾಲ ಜೇವಪಟ್ಟಣದಲ್ಲಿ ನೆಲೆಸಿರುವ ದತ್ತು ಪೋಷಕರಾದ ರತ್ನಾಕರ್‌ ಹಾಗೂ ಮಮತಾ ದಾಸ್‌ ನಡುವೆ ಸದ್ಯಕ್ಕೆ ಪರಿಹಾರದ ಹಣ ಪಡೆಯಲು ಪೈಪೋಟಿ ಏರ್ಪಟ್ಟಿದೆ ಎಂದು ವರದಿಯಾಗಿದೆ. ರಂಜನ್ ಮತ್ತು ರೂಪಾಲಿ ದಂಪತಿಗೆ ನಮಿತಾ ಜನಿಸಿದ್ದಳು. ಆದರೆ ರತ್ನಾಕರ್ ಮತ್ತು ಮಮತಾ ದಾಸ್ ಅವರು ಕಾನೂನಿನ ಪ್ರಕಾರ ಆ ಮಗುವನ್ನು ದತ್ತು ಪಡೆದುಕೊಂಡಿದ್ದರು ಎಂದು ವರದಿ ತಿಳಿಸಿದೆ.

Also Read  ಜಮೀನಿನಲ್ಲಿ ಸಿಕ್ಕಿದ ವಜ್ರ ರೈತ ರಾತ್ರೋರಾತ್ರಿ ಕೋಟ್ಯಾಧಿಪತಿ

 

 

 

error: Content is protected !!
Scroll to Top