ಅಪಘಾತದಲ್ಲಿ ಮೂವರು ಯುವಕರ ಸಾವಿನ ಪ್ರಕರಣಕ್ಕೆ ಟ್ವಿಸ್ಟ್!         

(ನ್ಯೂಸ್ ಕಡಬ)newskadaba.com ದಾವಣಗೆರೆ, ಫೆ.12. ಅಪರಿಚಿತ ವಾಹನಕ್ಕೆ ಬೈಕ್ ಡಿಕ್ಕಿಯಾಗಿ ಮೂವರು ಯುವಕರ ಸಾವಿನ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಉದ್ದೇಶಪೂರ್ವಕವಾಗಿ ಯುವಕರ ಹತ್ಯೆ ಮಾಡಿರುವ ಬಗ್ಗೆ ಕೂಡ ಇದೀಗ ಶಂಕೆ ವ್ಯಕ್ತವಾಗಿದೆ.

ಲಾರಿ ಹರಿದು ರಾಮನಗರದ ಪರಶುರಾಮ್ (24) ಸಂದೇಶ (23) ಹಾಗೂ ಶಿವಕುಮಾರ(26) ಮೃತಪಟ್ಟಿದ್ದರು. ಉದ್ದೇಶಪೂರ್ವಕವಾಗಿ ಲಾರಿ ಚಾಲಕನು ಯುವಕರ ಮೇಲೆ ಲಾರಿ ಹತ್ತಿಸಿದ ಕೊಲೆ ಮಾಡಿರುವ ಶಂಕೆ ಇದೀಗ ವ್ಯಕ್ತವಾಗಿದೆ‌. ಸಿಸಿ ಕ್ಯಾಮರಾದಲ್ಲಿ ಲಾರಿ ನಿಂತಿರುವ ದೃಶ್ಯ ಮಾತ್ರ ದಾಖಲಾಗಿದೆ. ಜೊತೆಗೆ ಘಟನಾ ಸ್ಥಳದಲ್ಲಿ ಕಬ್ಬಿಣದ ರಾಡ್ ಪತ್ತೆಯಾಗಿದ್ದು ಭಾರೀ ಸಂಶಯಕ್ಕೆ ಎಡೆಮಾಡಿದೆ.

Also Read  ಕಿಡ್ನಾಪ್ ಮಾಡಿ 5 ಲಕ್ಷ ರೂ. ಬೇಡಿಕೆ ಇಟ್ಟಿದ್ದಾರೆಂದು ತಂದೆ-ತಾಯಿಗೆ ವಂಚನೆ ➤ "ಇದು ಪೋಷಕರ ಹಣ ಲಪಟಾಯಿಸುವ ನಾಟಕ" ಎಂದ ಮಗ..!!!!

ಎರಡು ಬೈಕ್ ಗಳಲ್ಲಿ ಆರು ಯುವಕರು ತೆರಳಿದ್ದರು. ಅದರಲ್ಲಿ ಒಂದು ಬೈಕ್ ಅಪಘಾತವಾಗಿದೆ ಎನ್ನಲಾಗಿತ್ತು. ಇದೀಗ ಮತ್ತೊಂದು ಬೈಕ್ ನಲ್ಲಿದ್ದ ಯುವಕನಿಗೆ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎನ್ನಲಾಗುತ್ತಿದೆ.

 

error: Content is protected !!
Scroll to Top