ಪ್ರಿಯತಮನಿಂದ ಪ್ರೇಯಸಿಯ ಹತ್ಯೆ!

(ನ್ಯೂಸ್ ಕಡಬ) newskadaba.com ಬೀದರ್, ಫೆ.12. ಪ್ರೀತಿ ಮಾಡಿ ಮದುವೆಗೆ ನಿರಾಕರಿಸಿದ ಯುವತಿಯನನ್ನು ಕತ್ತು ಹಿಸಿಕಿ ಕೊಲೆ ಮಾಡಿದ ಘಟನೆ ನಗರದ ಸೋಲಪುರದಲ್ಲಿ ನಡೆದಿದೆ.

ನಗರದ ಮಂಗಲ್ ಪೇಟ್​ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಶಿವಲೀಲಾ ಹಾಗೂ ಶ್ರೀನಿವಾಸ್, ಒಂದೇ ಓಣಿಯಲ್ಲಿ ಅಕ್ಕಪಕ್ಕದ ಮನೆಯಲ್ಲಿ ವಾಸವಿದ್ದುದ್ದರಿಂದ ಇಬ್ಬರ ನಡುವೆ ಪರಿಚಯವಾಗಿದೆ. ಇದೇ ಪರಿಚಯ ಪ್ರೀತಿಗೆ ತಿರುಗಿ ಒಂದು ವರ್ಷದಿಂದ ಇಬ್ಬರು ಪರಸ್ಪರ ಪ್ರೀತಿ ಮಾಡಲು ಶುರುಮಾಡಿದ್ದಾರೆ. ಯಾವಾಗ ಇವರಿಬ್ಬರ ನಡುವೆ ಪ್ರೀತಿ ಗಾಢವಾಯಿತೋ ಆವಾಗ ಶ್ರೀನಿವಾಸ್ ಮದುವೆ ಮಾಡಿಕೊಳ್ಳುವಂತೆ ಒತ್ತಡ ಹಾಕಲು ಶರು ಮಾಡಿದ್ದಾನೆ. ಓದುವ ಹೊತ್ತಿನಲ್ಲಿ ಮದುವೆ ಬೇಡ ಎಂದು ಶಿವಲೀಲಾ ಶ್ರೀನಿವಾಸ್​ಗೆ ಹೇಳಿದ್ದಾಳೆ. ನಂತರ ಶಿವಲೀಲಾ ತಾಯಿ ವಿಜಯಲಕ್ಷ್ಮೀಗೆ ನಿಮ್ಮ ಮಗಳನ್ನ ಮದುವೆ ಮಾಡಿಕೊಡಿ ಎಂದು ಒತ್ತಡ ಹಾಕಲು ಪ್ರಾರಂಭ ಮಾಡಿದ್ದಾನೆ.

Also Read  ಸೆಲ್ಫಿ ತೆಗೆಯಲು ಮುಂದಾದ ಕಾರ್ಮಿಕನ ಮೇಲೆ ಕಾಡಾನೆ ದಾಳಿ

ಬಳಿಕ ತಾಯಿ ಮಗಳು ಮನೆ ಖಾಲಿ ಮಾಡಿ ಬೇರೆ ಊರಿಗೆ ಹೋಗಿದ್ದಾರೆ. ಇಷ್ಟಾದರೂ ಬಿಡದ ಶ್ರೀನಿವಾಸ್ ​ ಆಕೆ ಓದುತ್ತಿರುವ ಕಾಲೇಜಿಗೆ ಹೋಗಿ, ಶಿವಲೀಲಾನನ್ನು ಫುಸಲಾಯಿಸಿ ನಗರದ ಪಕ್ಕದಲ್ಲಿರುವ ಸೋಲಪುರ ಗ್ರಾಮದ ಬಳಿಗೆ ಕರೆದುಕೊಂಡು ಹೋಗಿ ಆಕೆಯ ವೇಲ್​ನಿಂದಲೇ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿ ತಲೆಮರೆಸಿಕೊಂಡಿದ್ದ, ಶ್ರೀನಿವಾಸ್​ನನ್ನು ಪೊಲೀಸರು ಹಿಡಿದು ಈಗ ಬಂಧನ ಮಾಡಿದ್ದಾರೆ. ಮದುವೆ ಮಾಡಿಕೊಳ್ಳಲು ನಿರಾಕರಿಸಿದ ಒಂದೇ ಒಂದು ಕಾರಣಕ್ಕೆ ನನ್ನ ಮಗಳನ್ನು ಕೊಲೆ ಮಾಡಿದ್ದ ಶ್ರೀನಿವಾಸ್​ಗೆ ಕಠಿಣ ಶಿಕ್ಷೆಯಾಗಬೇಕೆಂದು ತಾಯಿ ಒತ್ತಾಯಿಸುತ್ತಿದ್ದಾರೆ.

 

 

error: Content is protected !!
Scroll to Top