ವರ್ಕ್ಔಟ್ ಆಯ್ತು 50% ಡಿಸ್ಕೌಂಟ್ ಆಫರ್!

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.12. ಟ್ರಾಫಿಕ್​​​​​ ಸ್ಪೆಷಲ್​​ ಕಮಿಷನರ್​​​ ಸಲೀಂ ಪ್ಲಾನ್​​ ಯಶ್ವಸಿಯಾಗಿದೆ.  50% ಡಿಸ್ಕೌಂಟ್ ಆಫರ್ ಕೊನೆಗೂ ವರ್ಕ್​ಔಟ್​​ ಆಗಿದ್ದು, 9 ದಿನದಲ್ಲಿ ಬರೋಬ್ಬರಿ 120 ಕೋಟಿ ಕಲೆಕ್ಷನ್​​​​​​​ ಆಗಿದೆ. ​​​ಪೊಲೀಸ್​​ ಇಲಾಖೆ 3 ವರ್ಷಗಳಿಂದ ಬಾಕಿ ಇದ್ದ ಫೈನ್ ಕಲೆಕ್ಷನ್​​ ಮಾಡಿದ್ದು, ವಾಹನ ಸವಾರರು ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ಫೈನ್ ಕಟ್ಟಿದ್ದಾರೆ ಎಂದು ವರದಿಯಾಗಿದೆ.

9.45 ಲಕ್ಷ ಕೇಸ್ ಟ್ರಾಫಿಕ್ ದಂಡ ಕಲೆಕ್ಷನ್​​ ಮಾಡಲಾಗಿದ್ದು, ಆನ್​ಲೈನ್​​ ಮೂಲಕ 51.47 ಕೋಟಿ ದಂಡ ಕಟ್ಟಿದ್ದಾರೆ. ಸಾರ್ವಜನಿಕರು PDA ಮೆಷಿನ್ ಮೂಲಕ 52.85 ಕೋಟಿ ದಂಡ ಕಟ್ಟಿದ್ದಾರೆ.  ಸಲೀಂ ಸರ್ಕಾರಕ್ಕೆ ವರದಿ ನೀಡಿ 50% ಫೈನ್ ಡಿಸ್ಕೌಂಟ್​​​ಗೆ ಅನುಮತಿ ಪಡೆದಿದ್ದರು.

Also Read  ರಸ್ತೆ ಅಪಘಾತ- ಮೇಲ್ಸೇತುವೆಯಿಂದ ಬಿದ್ದ ಕಾರು ಓರ್ವ ಮೃತ್ಯು..!

error: Content is protected !!
Scroll to Top