ಆದಾಯ ತೆರಿಗೆ ಇಲಾಖೆಯ ಇನ್​​ಸ್ಪೆಕ್ಟರ್ ರೈಲ್ವೇ ಹಳಿಗೆ ತಲೆ ಕೊಟ್ಟು ಆತ್ಮಹತ್ಯೆ!                  

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ. 12. ಆದಾಯ ತೆರಿಗೆ ಇಲಾಖೆಯ ಇನ್​​ಸ್ಪೆಕ್ಟರ್ ಓರ್ವರು ರೈಲ್ವೆ ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಸಮೀಪ ನಡೆದಿದೆ. ಉತ್ತರ ಪ್ರದೇಶ ಮೂಲದವರಾದ ದೇವೆಂದ್ರ ದುಬೆ ಆತ್ಮಹತ್ಯೆ ಮಾಡಿಕೊಂಡವರು. ಅವರು ಬೆಂಗಳೂರಿನ ಆದಾಯ ತೆರಿಗೆ ಇಲಾಖೆಯಲ್ಲಿ ಇನ್​ಸ್ಪೆಕ್ಟರ್​ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಉತ್ತರ ಪ್ರದೇಶದಲ್ಲಿ ನೆಲೆಸಿರುವ ತನ್ನ ತಂದೆ-ತಾಯಿ ಜೊತೆ ಕೊನೆಯದಾಗಿ ಫೋನ್​ನಲ್ಲಿ ಮಾತನಾಡಿರುವುದು ತನಿಖೆ ವೇಳೆ ತಿಳಿದು ಬಂದಿದೆ. ಪತ್ನಿಗೆ ವಾಟ್ಸ್​ ಆಪ್​ ಮೂಲಕ ಇನ್ಶುರೆನ್ಸ್ ಪಾಲಿಸಿ ಹಾಗೂ ಡೆತ್​ ನೋಟ್​ ನ್ನು ಕೂಡ ಕಳುಹಿಸಿಕೊಟ್ಟಿದ್ದರು ಎನ್ನಲಾಗಿದೆ.

Also Read  ಸರ್ಕಾರಿ ಆಸ್ಪತ್ರೆಗಳ ಗುತ್ತಿಗೆ ನೌಕರರ ಸೇವೆ 2025ರವರೆಗೆ ವಿಸ್ತರಣೆ: ಹೆಚ್.ಕೆ ಪಾಟೀಲ್

 

error: Content is protected !!
Scroll to Top