(ನ್ಯೂಸ್ ಕಡಬ) newskadaba.com ಜೇವರ್ಗಿ, ಫೆ.12. ರಾಜ್ಯದಲ್ಲಿ, ಜಿಲ್ಲೆಯಲ್ಲಿ ಹಾಗೂ ತಾಲೂಕುಗಳಲ್ಲಿ ಪತ್ರಕರ್ತರ ಸಮಸ್ಯೆ ಬಗೆಹರಿಸಲು ಸಂಘಟಿತರಾಗಿ ಅಂದಾಗ ಮಾತ್ರ ಸಮಸ್ಯೆ ಬಗೆಹರಿಯುತ್ತದೆ ಹಾಗೂ ಯಾವುದೇ ಸಮಸ್ಯೆ ಬಂದಾಗ ಪತ್ರಕರ್ತರು ಎದೆಗುಂದಬಾರದು ಅಳುಕಬಾರದು ಕಾನೂನಾತ್ಮಕವಾಗಿ ಹೋರಾಟ ಮಾಡಬೇಕು ಯಾವುದೇ ಸುದ್ದಿ ಮುಲಾಜಿ ಇಲ್ಲದೇ ನಿರ್ಭಯತವಾಗಿ ಬರಿಯಬೇಕು ಮತ್ತು ಯಾವುದೇ ಸುದ್ದಿ ಹಗರಣ ಇರಬಹುದು ಅಪರಾಧ ಸುದ್ದಿ ಇರಬಹುದು ಅವುಗಳ ದಾಖಲೆಗಳು ಕಡ್ಡಾಯವಾಗಿ ಇರಬೇಕೆಂದು ಎಂದು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ರಾಜ್ಯಧ್ಯಕ್ಷ ನಾರಾಯಣ ಹೇಳಿದ್ದಾರೆ.