ವಿಚ್ಛೇದನಕ್ಕೆಂದು ಬಂದಿದ್ದ ಜೋಡಿಗಳು ಮತ್ತೆ ಒಂದಾದರು

(ನ್ಯೂಸ್ ಕಡಬ) newskadaba.com ಕೊಪ್ಪಳ, ಫೆ.11.   ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿ ಮತ್ತೇ ಒಂದಾಗಿರುವ ದಂಪತಿಗಳು. ನಾಲ್ಕು ಜೋಡಿಯ ವಿವಾಹ ವಿಚ್ಚೇದನ ಅರ್ಜಿ ಏಕಕಾಲಕ್ಕೆ ಸುಖಾಂತ್ಯ ಕಂಡಿರೋ ಅಪರೂಪದ ಪ್ರಕರಣ ಗಂಗಾವತಿಯ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ನಡೆದಿದೆ.‌ ಸಣ್ಣ–ಪುಟ್ಟ ಜಗಳ ಮತ್ತು ಮನಸ್ತಾಪದ ಕಾರಣ ನೀಡಿ, ಗಂಗಾವತಿ ತಾಲೂಕಿನ ವಿವಿಧ ಗ್ರಾಮದ ದಂಪತಿಗಳಾದ ದ್ಯಾವಣ್ಣ ‌ನಾಯಕ–ಅನಸೂಯ, ವಿರೇಶ– ಜಾನಕಮ್ಮ, ಶ್ರೀನಿವಾಸ – ತುಳಸಿದೇವಿ, ನಿಂಗಪ್ಪ– ಮಮತಾ ಗಂಗಾವತಿ ಕೋರ್ಟ್​ನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.

ಸುಮಾರು ‌ಎರಡು ವರ್ಷಗಳ ವಿಚಾರಣೆ ನಂತರ, ಇಂದು ನಡೆದ ರಾಷ್ಟ್ರೀಯ ಲೋಕ್ ಅದಾಲತ್​ನಲ್ಲಿ ನಾಲ್ಕು ಜೋಡಿಗಳು ಮತ್ತೇ ಒಂದಾಗಿದ್ದಾರೆ ಒಂದೇ ಬಾರಿಗೆ ನಾಲ್ಕು ಜೋಡಿ ಒಂದಾದ ಈ ಅಪರೂಪದ ಘಟನೆಗೆ ಗಂಗಾವತಿಯ ಒಟ್ಟು ನಾಲ್ವರು ನ್ಯಾಯಾಧೀಶರು ಮತ್ತು ವಕೀಲರು ಸಾಕ್ಷಿಯಾಗಿದ್ದಾರೆ.

Also Read  ಅಕ್ರಮ ಕಸಾಯಿಖಾನೆಗೆ ಪೊಲೀಸ್ ದಾಳಿ ➤ 23 ದನಗಳ ರಕ್ಷಣೆ

error: Content is protected !!
Scroll to Top