DCFವೆಂಕಟೇಶ್ ಮನೆ ಮೇಲೆ‌ ಲೋಕಾಯುಕ್ತ ದಾಳಿ ..  ➤ಕೆಜಿಗಟ್ಟಲೆ ಚಿನ್ನ-ಬೆಳ್ಳಿ ಪತ್ತೆ

(ನ್ಯೂಸ್ ಕಡಬ) newskadaba.com ಕೋಲಾರ, ಫೆ.11.  ಕೋಲಾರದ DCF ವೆಂಕಟೇಶ್​ ಬಳಿ ಕೆಜಿಗಟ್ಟಲೆ ಚಿನ್ನ-ಬೆಳ್ಳಿ ಪತ್ತೆಯಾಗಿದ್ದು, ಲೋಕಾಯುಕ್ತ ಅಧಿಕಾರಿಗಳು ನಿನ್ನೆ ಇಡೀ ದಿನ ದಾಳಿ ಮಾಡಿದ್ದರು. 8 ಕೆ.ಜಿ.ಬೆಳ್ಳಿ ,1 KG 300 ಗ್ರಾಂ ಚಿನ್ನಾಭರಣಗಳು ವಶಕ್ಕೆ ಪಡೆಯಲಾಗಿದೆ ವರದಿ ತಿಳಿಸಿದೆ.

ಲೋಕಾಯುಕ್ತ ಕೃಷಿ ಜಮೀನು, ಸೈಟ್​ಗಳ ದಾಖಲೆ ವಶಕ್ಕೆ ಪಡೆದಿದ್ದಾರೆ. ವೆಂಕಟೇಶ್ ಸಾತನೂರು‌, ಮಾಗಡಿ‌, ಮಧುಗಿರಿಯಲ್ಲಿ ಕೃಷಿ ಭೂಮಿ ಹೊಂದಿದ್ದರು. DCF ಬೆಂಗಳೂರಿನ ವಿಜಯನಗರದಲ್ಲಿ ವಸತಿ ಕಟ್ಟಡ, ‌ ನೆಲಮಂಗ ಮತ್ತು ಮಾಲೂರುನಲ್ಲಿ ಸೈಟ್ ಹೊಂದಿದ್ದರು. ಆದಾಯಕ್ಕಿಂತ 4 ಕೋಟಿಗೂ ಹೆಚ್ಚು ಗಳಿಸಿದ್ದ ಬಗ್ಗೆ ಮಾಹಿತಿ ಲಭಿಸಿದೆ.

Also Read  ಸುಳ್ಯ : ಲಾಕ್ ಡೌನ್ ಮಧ್ಯೆಯೂ ಹೆಚ್ಚಿದ ಜನಸಂದಣಿ

error: Content is protected !!
Scroll to Top