➤ ಪುತ್ತೂರಿನ ಹನುಮಗಿರಿಗೆ ಆಗಮಿಸಿದ ಗೃಹಸಚಿವ ಅಮಿತ್‌ ಶಾ

(ನ್ಯೂಸ್ ಕಡಬ) newskadaba.com. ಪುತ್ತೂರು.  ಫೆ.11. ಕೇರಳದ ಕಣ್ಣೂರಿನ ಏರ್‌ಪೋರ್ಟ್‌ನಿಂದ ಕರಾವಳಿಯ ಗಜಾನನ ಶಾಲೆಯ ಆವರಣಕ್ಕೆ ಗೃಹಸಚಿವ ಅಮಿತ್‌ ಶಾ ಆಗಮಿಸಿದ್ದಾರೆ. ಭಾರತೀಯ ವಾಯುಸೇನೆ ಹೆಲಿಕಾಪ್ಟರ್‌ನಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಹನುಮಗಿರಿ ಬಳಿಯ ಗಜಾನನ ಶಾಲೆಯ ಹೆಲಿಪ್ಯಾಡ್‌ಗೆ ಆಗಮಿಸಿದ್ದಾರೆ.

ಅಮಿತ್‌ ಶಾ ಮಂಗಳೂರಿಗೆ ಆಗಮಿಸುತ್ತಿದ್ದಂತೆ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಸಚಿವರಿಂದ ಭರ್ಜರಿ ಸ್ವಾಗತ ಮಾಡಲಾಗಿದೆ. ಹುನುಮಗಿರಿ ದೇವಸ್ಥಾನಕ್ಕೆ ಆಗಮಿಸಿ, ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಅಮಿತ್‌ ಶಾ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ , ರಾಜ್ಯ ಬಿಜೆಪಿ ಘಟಕ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿದಂತೆ ಹಲವು ನಾಯಕರು ಜೊತೆಗಿದ್ದರು.

Also Read  ರಾಜ್ಯದಲ್ಲಿ ಕೊರೋನಾ ಭೀತಿ ನಡುವೆ ಬಾಲ್ಯ ವಿವಾಹದ‌ ಸದ್ಧು ➤ 2 ತಿಂಗಳಲ್ಲಿ 17 ಮದುವೆಗೆ ತಡೆ

error: Content is protected !!
Scroll to Top