ಮಂಗಳೂರು: ಕ್ರಿಸ್‌ಮಸ್ ದಿನದಂದೇ ತಲವಾರು ದಾಳಿ ► ಯುವಕನ ಬರ್ಬರ ಹತ್ಯೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.25. ಯುವಕನೋರ್ವನನ್ನು ತಂಡವೊಂದು ತಲವಾರಿನಿಂದ ಕಡಿದು ಬರ್ಬರವಾಗಿ ಹತ್ಯೆಗೈದ ಘಟನೆ ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಗೋರಿಗುಡ್ಡೆಯ ಪರ್ಪಲ್ ಸ್ಟ್ರೀಟ್ ಎಂಬಲ್ಲಿ ಭಾನುವಾರ ತಡರಾತ್ರಿ ನಡೆದಿದೆ.

ಮೃತ ಯುವಕನನ್ನು ಗೋರಿಗುಡ್ಡೆ ನಿವಾಸಿ ಮೆರ್ಲಿಕ್ ಡಿಸೋಜ(26) ಎಂದು ಗುರುತಿಸಲಾಗಿದೆ. ರೌಡಿ ಶೀಟರ್ ಆಗಿದ್ದ ಈತ ರೌಡಿ ಮಂಕಿ ಸ್ಟ್ಯಾಂಡ್ ವಿಜಯ್ ಸಹಚರ ಎಂದು ಹೇಳಲಾಗಿದೆ. ಐದು ಮಂದಿ ತಂಡವೊಂದು ನಿನ್ನೆ ತಡರಾತ್ರಿ ಮನೆಗೆ ನುಗ್ಗಿ ಮೆರ್ಲಿಕ್ ಮೇಲೆ ಯದ್ವಾತದ್ವಾ ತಲವಾರು ಬೀಸಿದ್ದರಿಂದ ಗಂಭೀರ ಗಾಯಗೊಂಡ ಮೆರ್ಲಿಕ್ ಕೊನೆಯುಸಿರೆಳೆದಿದ್ದಾನೆ. ಈತನ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಯೊಂದರಲ್ಲೇ 4 ಪ್ರಕರಣಗಳು ದಾಖಲಾಗಿವೆ.

Also Read  ಯೇನೆಕಲ್ಲು: ನ.13 ರಂದು ಗೌರವ್ ಗಾರ್ಡನ್ ಸಭಾಂಗಣದಲ್ಲಿ ರಕ್ತದಾನ ಶಿಬಿರ

error: Content is protected !!