ಪರೋಟಾ ತಿಂದು, ಕೇರಳದ ವಿದ್ಯಾರ್ಥಿನಿ ಮೃತ್ಯು!

(ನ್ಯೂಸ್ ಕಡಬ) newskadaba.com ಇಡುಕ್ಕಿ, ಫೆ.11..  ಬಹುಕಾಲದಿಂದ ತಿನ್ನದಿದ್ದ ಆಹಾರವೊಂದನ್ನು ದಿಢೀರ್ ತಿಂದ ಕಾರಣ ಯುವತಿಯೊಬ್ಬಳಿಗೆ ಫುಡ್ ಅಲರ್ಜಿ ಉಂಟಾಗಿ ಆಕೆ ಮೃತಪಟ್ಟ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯ ತೋಡಪುಳದಲ್ಲಿ ನಡೆದಿದೆ. ಪರೋಟ ತಿಂದ ಬಳಿಕ ಫುಡ್​ ಅಲರ್ಜಿಯಿಂದಾಗಿ ಪಿಯು ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. ತೋಡಪುಳ ಸಮೀಪದ ವಾಜತೊಪ್ಪುವಿನ ನಿವಾಸಿ ನಯನಮರಿಯಾ (16) ಮೃತ ವಿದ್ಯಾರ್ಥಿನಿ. ವಾಜತೊಪ್ಪುವಿನ ಸೆಂಟ್​ ಜಾರ್ಜ್​ ಹೈಯರ್​ ಸೆಕೆಂಡರಿ ಸ್ಕೂಲ್​ನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಳು.

ಮೈದಾ ಮತ್ತು ಗೋಧಿಯಿಂದ ಮಾಡಿದ ಆಹಾರಗಳನ್ನು ಸೇವಿಸಿದಾಗಲೆಲ್ಲ ನಯನಾಗೆ ಅಲರ್ಜಿ ಆಗುತ್ತಿತ್ತು. ಹೀಗಾಗಿ ತುಂಬಾ ಸಮಯಗಳಿಂದ ಇಂಥಾ ಆಹಾರವನ್ನು ಸೇವಿಸುತ್ತಿರಲ್ಲಿಲ್ಲ. ಆದರೆ ಕೆಲ ದಿನಗಳ ಬಳಿಕ ಮತ್ತೆ ಮೈದಾ ಅಥವಾ ಗೋಧಿಯಿಂದ ಮಾಡಿದ ಆಹಾರವನ್ನು ಸೇವಿಸಿದ್ದಳು ಮತ್ತು ಆಕೆಗೆ ಏನೂ ಆಗಿರಲಿಲ್ಲ. ಹೀಗಾಗಿ ಏನೂ ಆಗಲಿಲ್ಲ ಎಂಬ ನಂಬಿಕೆಯಿಂದಲೇ ಇತ್ತೀಚೆಗೆ ನಯನಾ ಮೈದಾದಿಂದ ಮಾಡಿ ಪರೋಟವನ್ನು ತಿಂದಿದ್ದಳು. ಆದರೆ ಪರೋಟ ತಿಂದ ಬಳಿಕ ಈಕೆಗೆ ಅಲರ್ಜಿ ಕಾಣಿಸಿಕೊಂಡಿತ್ತು. ತಕ್ಷಣ ಇಡುಕ್ಕಿ ಮೆಡಿಕಲ್​ ಕಾಲೇಜಿಗೆ ದಾಖಲಿಸಲಾಯಿತು. ವೆಂಟಿಲೇಟರ್​ನಲ್ಲಿ ಇಟ್ಟು ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾಳೆ ಎಂದು ವರದಿಯಾಗಿದೆ.

error: Content is protected !!
Scroll to Top