ಟರ್ಕಿ ಕೋಳಿ ಸಾಕಾಣಿಕೆಯೊಂದು ಲಾಭದಾಯಕ ಉದ್ಯಮ ➤ ಇದರ ಕುರಿತು ಮಾಹಿತಿ ಇಲ್ಲಿದೆ.

(ನ್ಯೂಸ್ ಕಡಬ) newskadaba.com. ಬೆಂಗಳೂರು.ಫೆ.11. ಟರ್ಕಿ ಕೋಳಿ ಸಾಕಾಣಿಕೆ ಇತ್ತೀಚಿನ ದಿನಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ಉದ್ಯಮ. ಟರ್ಕಿ ಕೋಳಿ ಫಾರ್ಮಿಂಗ್ ಮಾಡಿದರೆ ಹೆಚ್ಚು ಲಾಭವನ್ನು ಪಡೆಯಬಹುದು. ಏಕೆಂದರೆ ಇದರಲ್ಲಿ ಮಾಂಸ, ಮೊಟ್ಟೆ ಜೊತೆಗೆ ಕೋಳಿ ಗೊಬ್ಬರಕ್ಕೂ ಭೇಡಿಕೆಯಿದೆ.

ಟರ್ಕಿ ಕೋಳಿ ಮಾಂಸಕ್ಕೆ ಬೇಡಿಕೆ ಹೆಚ್ಚಿದೆ. ಈ ಮಾಂಸದಲ್ಲಿ ಶೇ. 25ರಷ್ಟು ಹಾಗೂ ಮೊಟ್ಟೆಗಳಲ್ಲಿ 13ರಷ್ಟು ಪ್ರೊಟೀನ್​ ಅಂಶ ಕಂಡು ಬರುತ್ತದೆ. ಜೊತೆಗೆ ಈ ಮಾಂಸದಲ್ಲಿ ಕಡಿಮೆ ಕೊಬ್ಬಿನ ಅಂಶ, ಹೆಚ್ಚು ರುಚಿಕರವಾಗಿರುತ್ತದೆ. ಇನ್ನು ಈ ಕೋಳಿಯ ಗೊಬ್ಬರದಲ್ಲಿ 5 ರಿಂದ 6 ಪ್ರತಿಶತ ಸಾರಜನಕ ಹಾಗೂ 2 ರಿಂದ 3ರಷ್ಟು ಪೊಟ್ಯಾಷಿಯಂ ಅಂಶ ಇದೆ.

ಟರ್ಕಿ ಕೋಳಿ ಸಾಗಾಣಿಕೆಯನ್ನು ಸುಲಭವಾಗಿ ಮಾಡಬಹುದಾಗಿರುವುದರಿಂದ ಸಣ್ಣ ಪ್ರಮಾಣದ ರೈತರು ಈ ವ್ಯವಹಾರವನ್ನು ಮಾಡಬಹುದಾಗಿದೆ. ಮನೆ ಅಥವಾ ಜಮೀನಿನ ತೆರೆದ ಜಾಗದಲ್ಲಿ ಈ ಉದ್ಯಮವನ್ನು ಮಾಡಬಹುದು.

ನಾಲ್ಕು ಗಂಡು ಮತ್ತು ಒಂದು ಹೆಣ್ಣು ಕೋಳಿಯ ಅನುಪಾತದಲ್ಲಿ ಇದರ ವಂಶಾಭಿವೃದ್ಧಿ ಮಾಡಬೇಕು. ಮೊಟ್ಟೆಗಳನ್ನು ಅಥವಾ ಚಿಕ್ಕ ಮರಿಗಳನ್ನು ಕೇಂದ್ರೀಯ ಕುಕ್ಕುಟ ಸಂಸ್ಥೆ, ಪಶು ಸಂಗೋಪನಾ ಇಲಾಖೆ ಅಥವಾ ಕೃಷಿ ವಿಶ್ವವಿದ್ಯಾಲಯದಿಂದ ಖರೀದಿಸಿದರೆ ಉತ್ತಮ. ಏಕೆಂದರೆ ಇಲ್ಲಿ ವೈಜ್ಞಾನಿಕವಾಗಿ ಅವುಗಳ ಪೋಷಣೆ ನಡೆಸಲಾಗುತ್ತದೆ. ಈ ಕಾರಣದಿಂದ ರೋಗಬಾಧೆ ತಗುಲುವುದು ಕಡಿಮೆ.

Also Read  ಮೂರೇ ದಿನಗಳಲ್ಲಿ ಬುಕ್ಕಿಂಗ್ ಸ್ಥಗಿತಗೊಳಿಸಿದ ರಿಲಯನ್ಸ್ ಜಿಯೋ.....!!!

ಟರ್ಕಿಕೋಳಿಗಳಿಗೆ ಮನೆಯಲ್ಲಿ ಉಳಿದಂತಹ ಆಹಾರ, ತರಕಾರಿ ತ್ಯಾಜ್ಯ, ಜೊತೆಗೆ ಗೆದ್ದಲು ಹುಳು, ಸಣ್ಣ ಕೀಟಗಳನ್ನು ಅಹಾರವಾಗಿ ನೀಡಬಹುದು. ಹಸಿರೆಲೆಗಳನ್ನು ಕತ್ತರಿಸಿ ಸಹ ಹಾಕಬಹುದು. ಜವಾರಿ ಕೋಳಿಯಂತೆ ಇದು ಕಾಳು, ಬೀಜ, ಕೀಟ, ಹಸಿರು ಹುಲ್ಲು, ಎರೆಹುಳು, ಸಣ್ಣಹುಳು, ಗೆದ್ದಲುಹುಳು ಹಾಗೂ ಮಿಕ್ಕಿದ ಅಡುಗೆ ಸೇರಿದಂತೆ ಇತರೆ ಆಹಾರವನ್ನು ಸೇವಿಸುತ್ತದೆ.ಇದರ ನಿರ್ವಹಣೆ ಕೂಡ ಕಡಿಮೆ ವೆಚ್ಚದಲ್ಲಿ ಮಾಡಹುದಾಗಿದೆ.

ಸಾಮಾನ್ಯ ಕೋಳಿಗಿಂತಲೂ ಈ ಟರ್ಕಿ ಕೋಳಿಗಳು ಬಹಳ ವೇಗವಾಗಿ ಬೆಳೆಯುತ್ತವೆ. ಇದರಿಂದ ಈ ಕೋಳಿಗಳು ಏಳೆಂಟು ತಿಂಗಳಲ್ಲಿ 12ರಿಂದ 15 ಕೆಜಿ ತೂಕ ಬರುತ್ತವೆ. ಕೆಲವೊಂದು ಕೋಳಿಗಳು 15-16 ಕೆಜಿ ವರೆಗೂ ಬರುತ್ತವೆ. ಒಂದು ಕೆಜಿ ಮಾಂಸಕ್ಕೆ 300ರಿಂದ 350 ರೂ ಇದೆ. ಒಂದು ಕೋಳಿ 1000 ರೂಗಳಿಂದ 1500ರೂ ತನಕ ಮಾರಾಟವಾಗುತ್ತವೆ.

Also Read  ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅಪಸ್ವರವೇಕೆ ?    ➤ ಲೇಖನ; ದಿವಾಕರ್‌.ಡಿ.ಮಂಡ್ಯ               

ಈ ತಳಿ ಹೊರದೇಶದ ಮೂಲದವು, ಹಾಗಾಗಿ ನಮ್ಮ ಪರಿಸರಕ್ಕೆ ಒಗ್ಗಿಕೊಳ್ಳುವವರೆಗೆ ಪೋಷಣೆ ಅಗತ್ಯ, ಆರಂಭದ ನಾಲ್ಕು ವಾರಗಳವರೆಗೆ ಕೋಳಿಮರಿಗಳನ್ನು 35 ಸೆಂಟಿಗ್ರೇಡ್ ತಾಪಮಾನದಲ್ಲಿ ಬ್ರೀಡಿಂಗ್ ಮಾಡಬೇಕಾಗುತ್ತವೆ. ನಂತರ ಕ್ರಮೇಣ 25 ರಿಂದ 27 ಸೆಂಟಿಗ್ರೇಡ್ ಉಷ್ಣತೆಯಲ್ಲಿ ಸಾಕಬಹುದು. ಎರಡು ಇಂಚಿನಷ್ಟು ಭತ್ತದ ಹೊಟ್ಟನ್ನೋ ಅಥವಾ ಮರದ ಹುಡಿಯನ್ನು ನೆಲಕ್ಕೆ ಹಾಕಿ ಅದರ ಮೇಲೆ ಸಾಕಬಹುದಾಗಿದೆ.

error: Content is protected !!
Scroll to Top