ಮಗನ ಹುಟ್ಟು ಹಬ್ಬದ ದಿನದಂದೇ ತಂದೆ ಮೃತ್ಯು

(ನ್ಯೂಸ್ ಕಡಬ)newskadaba.com.ಮಂಡ್ಯ, ಫೆ.11. ಮಗನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಮಾಡಲು ಕೇಕ್​ ತರಲು ಹೋದ ವ್ಯಕ್ತಿಯ ತಲೆ ಮೇಲೆ ಮರ ಬಿದ್ದು ದುರಂತ ಸಾವನ್ನಪ್ಪಿದ್ದಾರೆ. ಈ ಘಟನೆ ಮಂಡ್ಯ ನಗರದ ತಾವರಗೆರೆಯ ಚಲುವಯ್ಯ ಪಾರ್ಕ್ ಬಳಿ ನಡೆದಿದೆ. ಉದಯ್ ಕುಮಾರ್ ಮೃತ ದುರ್ವೈವಿ.

ಪುತ್ರ ದಿಕ್ಷಿತ್ ನ 7ನೇ ವರ್ಷದ ಹುಟ್ಟು ಹಬ್ಬವಿತ್ತು. ಈ ಹಿನ್ನೆಲೆಯಲ್ಲಿ ಉದಯ್ ಕುಮಾರ್, ಬೈಕ್​ನಲ್ಲಿ ಪತ್ನಿ ಧನಲಕ್ಷ್ಮೀ ಜೊತೆ ಕೇಕ್​ ತರಲು ಹೋಗಿದ್ದಾರೆ. ಆದರೆ, ದಾರಿ  ಮಧ್ಯ ಚಲುವಯ್ಯ ಪಾರ್ಕ್ ಬಳಿ ಬರುತ್ತಿದ್ದಂತೆ ಮರ ಉದಯ್ ಕುಮಾರ್ ಬೈಕ್​ ಮೇಲೆ ಉರುಳಿ ಬಿದ್ದಿದೆ. ಪರಿಣಾಮ ಪೌರ ಕಾರ್ಮಿಕನಾಗಿದ್ದ ಉದಯ್​ ಕುಮಾರ್ ಮೃತಪಟ್ಟಿದ್ದಾರೆ. ಇನ್ನು ಪತ್ನಿ ಧನಲಕ್ಷ್ಮೀ ಹಾಗೂ ಪುತ್ರ ದಿಕ್ಷಿತ್​ಗೆ ಗಾಯಗಳಾಗಿವೆ.

Also Read  ಸಿಎಂ ಸಿದ್ದರಾಮಯ್ಯ ಎದುರೇ ಕಿತ್ತಾಡಿಕೊಂಡ `ಕೈ' ನಾಯಕಿಯರು

 

error: Content is protected !!
Scroll to Top