ಕೆಕೆಆರ್‌ಟಿಸಿ ಡ್ರೈವರ್ ಕಂ ಕಂಡಕ್ಟರ್ ದೈಹಿಕ ಹುದ್ದೆ ನೇಮಕಾತಿ ➤ ತೊಡೆಗೆ ಗೋಧಿ ಹಿಟ್ಟು ಕಟ್ಟಿಕೊಂಡು ಪರೀಕ್ಷೆಗೆ ಹಾಜರಾದ ಅಭ್ಯರ್ಥಿ

(ನ್ಯೂಸ್ ಕಡಬ) newskadaba.com. ಕಲಬುರಗಿ , ಫೆ.11.  ಕಲಬುರಗಿಯಲ್ಲಿ ಡ್ರೈವರ್ ಕಂ ಕಂಡಕ್ಟರ್ ಹುದ್ದೆ ದೈಹಿಕ ಪರೀಕ್ಷೆಯಲ್ಲಿ ಸಹ ಅಭ್ಯರ್ಥಿಗಳು ನಾನಾ ಕಸರತ್ತು ಮಾಡಿದ್ದಾರೆ. ಆದ್ರೆ ಸಾರಿಗೆ ಇಲಾಖೆ ಅಧಿಕಾರಿಗಳು (KKRTC Staff) ಆಭ್ಯರ್ಥಿಗಳ ಕಳ್ಳಾಟ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕೆಕೆಆರ್‌ಟಿಸಿ ಡ್ರೈವರ್ ಕಂ ಕಂಡಕ್ಟರ್ ನೇಮಕಾತಿ ಅಕ್ರಮ ಪಿಎಸ್‌ಐ ಪರೀಕ್ಷಾ ಹಗರಣವನ್ನ ಮೀರಿಸುವಂತಿದೆ.

ಕಲಬುರಗಿಯಲ್ಲಿ 1619 ಹುದ್ದೆಗಳಿಗೆ ದೈಹಿಕ ಪರೀಕ್ಷೆ ನಡೆಸಲಾಗುತ್ತಿದೆ. ದೈಹಿಕ ಪರೀಕ್ಷೆಯಲ್ಲಿ ಭಾಗಿಯಾಗುವ ಅಭ್ಯರ್ಥಿಗಳು ನಿಯಮಗಳ ಪ್ರಕಾರ 163 ಸೆಂಟಿ ಮೀಟರ್ ಎತ್ತರ ಮತ್ತು 55 KG ತೂಕ ಹೊಂದಿರಬೇಕು. ಕಡಿಮೆ ತೂಕ ಹೊಂದಿರುವ ಅಭ್ಯರ್ಥಿಗಳು, ದೈಹಿಕ ಪರೀಕ್ಷೆ ವೇಳೆ ತೂಕದ ಕಲ್ಲುಗಳನ್ನು ತೊಡೆ ಭಾಗಕ್ಕೆ ಕಟ್ಟಿಕೊಂಡು ಬಂದಿದ್ದಾರೆ.

ಅಧಿಕಾರಿಗಳು ಅನುಮಾನ ಬಂದ ಹಿನ್ನೆಲೆ ಪ್ಯಾಂಟ್​ ಕಳಚಿದಾಗ ಕಳ್ಳಾಟ ಬಯಲಾಗಿತ್ತು. ಇದೀಗ ಅಂತಹುವುದೇ ಮತ್ತೊಂದು ವಿಡಿಯೋ ಬೆಳಕಿಗೆ ಬಂದಿದ್ದು, ಅಭ್ಯರ್ಥಿಯೋರ್ವವ ತೊಡೆ ಭಾಗಕ್ಕೆ ಗೋಧಿಹಿಟ್ಟು ಕಟ್ಟಿಕೊಂಡು ಬಂದು ತಗ್ಲಾಕೊಂಡಿದ್ದಾನೆ. ದೈಹಿಕ ಪರೀಕ್ಷೆ ವೇಳೆ ಅನುಮಾನ ಬಂದ ಹಿನ್ನೆಲೆ ಪ್ಯಾಂಟ್ ಬಿಚ್ಚಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಕೆಕೆಆರ್​ಟಿಸಿ ಎಂಡಿ ರಾಚಪ್ಪ ದೈಹಿಕ ಪರೀಕ್ಷೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸುತ್ತಿದ್ದಾರೆ. ಗೋಧಿಹಿಟ್ಟು ಇರಿಸಿಕೊಂಡು ಬಂದಿದ್ದ ಅಭ್ಯರ್ಥಿಯನ್ನು ನೇಮಕಾತಿಯ ಬ್ಲಾಕ್​ ಲಿಸ್ಟ್​ಗೆ ಹಾಕಿದ್ದಾರೆ. ಅಧಿಕಾರಿಗಳು ಅಭ್ಯರ್ಥಿಗಳ ಹೆಸರನ್ನು ಬಹಿರಂಗಗೊಳಿಸಿಲ್ಲ.

ಗೋಧಿಹಿಟ್ಟನ್ನು ಚೆನ್ನಾಗಿ ಕಲಸಿ, ಅದನ್ನು ತೊಡೆಯ ಭಾಗಕ್ಕೆ ಸುತ್ತಲೂ ಮೆತ್ತಿಕೊಂಡಿದ್ದಾನೆ. ನಂತರ ಹಿಟ್ಟು ಕೆಳಗೆ ಜಾರದಂತೆ ಅದನ್ನು ಬಟ್ಟೆಯಿಂದ ಸುತ್ತಿದ್ದಾನೆ. ನಂತರ ಬಟ್ಟೆ ಬಿಚ್ಚದಂತೆ ಅದನ್ನು ದಾರದಿಂದ ಬಿಗಿದಿದ್ದಾನೆ ಎಂದು ತಿಳಿದು ಬಂದಿದೆ.

error: Content is protected !!

Join the Group

Join WhatsApp Group