ಚಾಕು ಇರಿದು ಸ್ನೇಹಿತನ ಕೊಲೆ!

(ನ್ಯೂಸ್ ಕಡಬ)newskadaba.com.ಬೆಂಗಳೂರು. ಫೆ.11. ಹಳೆಯ ದ್ವೇಷಕ್ಕೆ ಚಾಕು ಇರಿದು ಗೆಳೆಯನ ಕೊಲೆಯಾಗಿದ್ದು, ಈ ಘಟನೆ ಬೆಂಗಳೂರಿನ ಕೋಣನಕುಂಟೆ ಯಲ್ಲಿ ನಡೆದಿದೆ. ಶರತ್ ಕುಮಾರ್ (25) ಕೊಲೆಯಾದ ಯುವಕನಾಗಿದ್ದಾನೆ. ಲೋಕೇಶ್ ಎಂಬಾತನಿಂದ ಚಾಕು ಇರಿದು ಕೊಲೆ ಮಾಡಿದ್ದಾನೆ ಎಂದು ವರದಿಯಾಗಿದೆ.

ಶರತ್ ಕುಮಾರ್, ಮತ್ತು ಲೋಕೇಶ್ ಸ್ನೇಹಿತಾಗಿದ್ದರು.  ಹಣಕಾಸಿನ ವಿಚಾರಕ್ಕೆ ಗಲಾಟೆ ಮಾಡ್ಕೊಂಡು ಬೇರೆಯಾಗಿದ್ರು. ಇದೇ ವಿಚಾರ ಸಂಬಂಧ ಇಬ್ಬರ ನಡುವೆ ಗಲಾಟೆ ನಡೆದಿದೆ. ಶರತ್ ಕುಮಾರ್ ಮೊದಲು ಲೋಕೇಶ್ ಗೆ ಚಾಕು ಇರಿಯಲು ಮುಂದಾಗಿದ್ದನು, ಈ ವೇಳೆ ಲೋಕೇಶ್  ಶರತ್ ಕುಮಾರ್ ಬಳಿಯ ಚಾಕು ಕಸಿದುಕೊಂಡು ಅವನಿಗೆ ಚಾಕು ಇರಿದು ಕೊಲೆ ಮಾಡಿದ್ದಾನೆ. ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಎರಡು ವರ್ಷಗಳಿಂದ ಕ್ಯಾನ್ಸರ್ ವಿರುದ್ಧ ಹೋರಾಟ ➤ ಭಾರತದ ಮಾಜಿ ಶೂಟರ್ ಪೂರ್ಣಿಮಾ ನಿಧನ

 

error: Content is protected !!
Scroll to Top