ಶಿಕ್ಷಕರ ನೇಮಕಾತಿ ಹಗರಣ ➤ 8 ಶಿಕ್ಷಕರು ಬಂಧನ

(ನ್ಯೂಸ್ ಕಡಬ)newskadaba.com.ಬೆಂಗಳೂರು. ಫೆ.11.  2012-13 ಹಾಗೂ 2014-15ನೇ ಸಾಲಿನ ಸರ್ಕಾರಿ ಪ್ರೌಢ ಶಾಲಾ ಸಹ ಶಿಕ್ಷಕರ ನೇಮಕಾತಿ ಹಗರಣ ಸಂಬಂಧ ಮತ್ತೆ ಇಬ್ಬರು ಶಿಕ್ಷಕಿಯರು ಸೇರಿದಂತೆ ಎಂಟು ಮಂದಿ ಶಿಕ್ಷಕರನ್ನು ಅಪರಾಧ ತನಿಖಾ ದಳ (ಸಿಐಡಿ) ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಈ ಎರಡೂ ಪ್ರಕರಣ ಸಂಬಂಧ ಈಗಾಗಲೇ ಶಿಕ್ಷಣ ಇಲಾಖೆಯ ಇಬ್ಬರು ನಿರ್ದೇಶಕರು, ಮೂವರು ನಿವೃತ್ತ ಸಹ ನಿರ್ದೇಶಕರು, ಪ್ರಥಮ ದರ್ಜೆ ಸಹಾಯಕ, ಕಂಪ್ಯೂಟರ್‌ ಪ್ರೋಗ್ರಾಮರ್‌ ಹಾಗೂ 61 ಸಹ ಶಿಕ್ಷಕರು ಸೇರಿದಂತೆ 68 ಆರೋಪಿಗಳ ಬಂಧನವಾಗಿದೆ. ಈ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಚಾಜ್‌ರ್‍ಶೀಟ್‌ ಅನ್ನು ಸಲ್ಲಿಸಿ ತನಿಖೆ ಮುಂದುವರೆಸಿರುವ ಸಿಐಡಿ  ಬಾಗಲಕೋಟೆ, ವಿಜಯಪುರ, ಉತ್ತರ ಕನ್ನಡ, ತುಮಕೂರು, ಶಿವಮೊಗ್ಗ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಮತ್ತೆ ದಾಳಿ ನಡೆಸಿತು. ಈ ವೇಳೆ ಎಂಟು ಮಂದಿ ಶಿಕ್ಷಕರು ಬಂಧಿತರಾಗಿದ್ದಾರೆ. ಬಳಿಕ ವಿಚಾರಣೆ ನಡೆಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Also Read  ಪಿಲಿಕುಲದಲ್ಲಿ ಮೂರು ಮರಿಗಳಿಗೆ ಜನ್ಮ ನೀಡಿದ "ಹುಲಿ ರಾಣಿ"

 

 

 

error: Content is protected !!
Scroll to Top