(ನ್ಯೂಸ್ ಕಡಬ) newskadaba.com ಟರ್ಕಿ, ಫೆ.10. ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪಕ್ಕೆ ಮತ್ತಷ್ಟು ಮೃತರ ಸಂಖ್ಯೆ 22 ಸಾವಿರ ಗಡಿ ದಾಟಿದೆ. ಅವಶೇಷದ ಅಡಿಯಲ್ಲಿ ಸಿಲುಕಿ ಮೃತಪಟ್ಟ ಒಂದಿಷ್ಟು ಮಂದಿಯಾದರೆ, ಅತಿಯಾಶ ಶೀತ, ಹಸಿವು ಮತ್ತು ಅವಶೇಷದ ಅಡಿ ಉಸಿರುವಗಟ್ಟಿ ಸಾಯುವವರ ಸಂಖ್ಯೆಯೇ ಹೆಚ್ಚಾಗುತ್ತಿದೆ.
ಟರ್ಕಿಯಲ್ಲಿ ಭಾರತದ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು, ಅವಶೇಷದ ಅಡಿ ಸಿಲುಕಿದವರ ಶೋಧಕ್ಕೆ NDRF ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದು, NDRF ಅವಶೇಷದ ಅಡಿ ನುಗ್ಗಿ ಜನರನ್ನು ರಕ್ಷಣೆ ಮಾಡುತ್ತಿದ್ದಾರೆ. ಭಾರತದ ತಂಡಗಳು ಮೂರು ವಿಮಾನಗಳಲ್ಲಿ ತೆರಳಿದ್ದಾರೆ. 100ಕ್ಕೂ ಹೆಚ್ಚು ನುರಿತ ತಜ್ಞರು, ಯೋಧರಿಂದ ಶೋಧ ಕಾರ್ಯ ನಡೆಯುತ್ತಿದೆ ಎಂದು ವರದಿಯಾಗಿದೆ.