ಹಾಡಹಗಲೆ ಜ್ಯೂವೆಲರಿ ಅಂಗಡಿಗೆ ನುಗ್ಗಿದ ಕಳ್ಳ ➤ 20 ಲಕ್ಷ ರೂ ಮೌಲ್ಯದ ಚಿನ್ನಾಭರಣ ಕಳವು

(ನ್ಯೂಸ್ ಕಡಬ) newskadaba.com   ಚಿಕ್ಕಬಳ್ಳಾಪುರ, ಫೆ.10. ಜನನಿಬಿಡ ಪ್ರದೇಶದಲ್ಲಿರುವ ಜ್ಯೂವೆಲರಿ ಶಾಪ್ ಗೆ ನುಗ್ಗಿದ ಒಬ್ಬನೇ ಕಳ್ಳ ಏಕಾಂಗಿಯಾಗಿ ಹಾಡಹಗಲೆ ಅಂಗಡಿಯಲ್ಲಿದ್ದ 20 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದು, ಬಾಗಿಲು ಮುಚ್ಚಿದ್ದ ಜ್ಯೂವೆಲರ್ಸ್ ಶಾಪ್ ನ ಶೆಟರ್ ಎತ್ತಿ ಒಳಬಂದ ಅಸಾಮಿಯೊಬ್ಬ… ಹಾಡಹಗಲೆ ಜ್ಯೂವೆಲರಿ ಅಂಗಡಿಯ ಡ್ರಾಯರ್ ಗೆ ಕೈ ಹಾಕಿ ಅದರಲ್ಲಿದ್ದ 20 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು  ಕದ್ದು ಪರಾರಿಯಾಗಿರುವುದು ಚಿಕ್ಕಬಳ್ಳಾಪುರ ನಗರದ  ಗಂಗಮ್ಮ ಗುಡಿ ರಸ್ತೆಯಲ್ಲಿರುವ ಗಣೇಶ್ ಜ್ಯೂವೆಲರ್ಸ್ ಅಂಗಡಿಯಲ್ಲಿ.  ಅಂಗಡಿಯ ಮಾಲಿಕ ಕೆ.ಆರ್. ಶ್ರೀಧರ್, ಮಧ್ಯಾಹ್ನ ಮೂರು ಗಂಟೆ ಸಮಯದಲ್ಲಿ ಊಟಕ್ಕೆ ಹೋಗಲು ಅಂಗಡಿಯ ಬೀಗ ಹಾಕಿಸಿ, ಬೀಗ ತೆಗೆದುಕೊಂಡು ಮನೆಗೆ ಹೋಗಿದ್ದಾನೆ. ವಾಪಸ್ ಬಂದು ನೋಡುವಷ್ಟರಲ್ಲಿ ಅಂಗಡಿಯಲ್ಲಿದ್ದ ಚಿನ್ನಾಭರಣಗಳು ಕಳ್ಳತನ ಆಗಿರುವುದು ಗೊತ್ತಾಗಿದೆ.

Also Read  ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ

ಬೆಳಿಗ್ಗೆಯಿಂದ ವ್ಯಾಪಾರ ಮಾಡಿದ್ದ ಅಂಗಡಿಯ ಮಾಲಿಕರೊಬ್ಬರು ಊಟಕ್ಕೆ  ಮನೆಗೆ ಹೋಗಿ ವಾಪಸ್ ಬರುವುದರೊಳಗೆ, ಹಾಡಹಗಲೆ ಚಿನ್ನಾಭರಣಗಳ ಕಳ್ಳತನ ಮಾಡಿರುವುದರ ಹಿಂದೆ ಅಂಗಡಿಯ ಕಾರ್ಮಿಕರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

error: Content is protected !!
Scroll to Top