ಬೆಂಕಿ ಅವಘಡ ➤ಕಟಾವಿಗೆ ಬಂದಿದ್ದ 3 ಎಕರೆ ಕಬ್ಬು ನಾಶ

(ನ್ಯೂಸ್ ಕಡಬ) newskadaba.com   ತಿ.ನರಸೀಪುರ, ಫೆ.10.  ತಾಲೂಕಿನ ಹ್ಯಾಕನೂರು ಗ್ರಾಮದಲ್ಲಿ ಕಟಾವಿಗೆ ಬಂದಿದ್ದ 3 ಎಕರೆ ಕಬ್ಬು ವಿದ್ಯುತ್ ತಗುಲಿ ಸಂಪೂರ್ಣ  ಬೆಂಕಿಗಾಹುತಿ. ಹ್ಯಾಕನೂರು ಗ್ರಾಮದ ಸುಂದ್ರಮ್ಮ ಕೋಂ ಲೇ .ಮಹದೇವಪ್ಪ ಎಂಬುವರು ಬೆಳೆದಿದ್ದ ಕಬ್ಬು ಬೆಂಕಿಯ ಸ್ಪರ್ಶದಿಂದ ಸುಟ್ಟು ಭಸ್ಮವಾಗಿದೆ ಸ್ಥಳಕ್ಕೆ ಅಗ್ನಿಶಾಮಕ ದಳ ಬಂದು ಕಾರ್ಯಾಚರಣೆ ಪ್ರಾರಂಭಿಸಿದರೂ ಬೆಂಕಿಯನ್ನು ನಂದಿಸಲು ಸಾಧ್ಯವಾಗಲಿಲ್ಲ.ಹಾಗಾಗಿ 3 ಎಕರೆ ಕಬ್ಬಿನ ಗದ್ದೆ ಸಂಪೂರ್ಣ ಸುಟ್ಟು ನಾಶವಾಗಿದೆ.

ಸಂತ್ರಸ್ತೆ ಸುಂದ್ರಮ್ಮ ಮಾತನಾಡಿ,ಕಬ್ಬು ಕಟಾವಿಗೆ ಬಂದಿದ್ದು,ಮುಂದಿನ ತಿಂಗಳು ಕಟಾವು ಆಗಬೇಕಿತ್ತು.ಆದರೆ,ವಿದ್ಯುತ್ ಅನಾಹುತದಿಂದ ಕಬ್ಬಿನ ಗದ್ದೆ ಸುಟ್ಟು ಕರಕಲಾಗಿದೆ. ನಮಗೆ ಲಕ್ಷಾಂತರ ರೂಗಳ ನಷ್ಟವಾಗಿದೆ.ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

Also Read  ಹೃದಯಾಘಾತದಿಂದ ಮೃತಪಟ್ಟಿದ್ದ ಪತ್ರಕರ್ತ ಕಲ್ಲುಗುಡ್ಡೆ ಖಾದರ್ ಸಾಹೇಬ್ ➤ ಸಾಹೇಬ್ ಕುಟುಂಬಕ್ಕೆ ಸರಕಾರದಿಂದ 5 ಲಕ್ಷ ರೂ. ಪರಿಹಾರ

 

error: Content is protected !!
Scroll to Top