➤ ಕದ್ರಿ ಪಾರ್ಕ್ ನಲ್ಲಿ ಕುಳಿತ್ತಿದ್ದ ಜೋಡಿಗಳ ಮೇಲೆ ಸಂಘಟನೆ ಕಾರ್ಯಕರ್ತರಿಂದ ಹಲ್ಲೆ

(ನ್ಯೂಸ್ ಕಡಬ)newskadaba.com.ಮಂಗಳೂರು, ಫೆ.10. ಕದ್ರಿ ಪಾರ್ಕ್ ಗೆ ಬಂದಿದ್ದ ಜೋಡಿಗೆ ಸಂಘಟನೆ ಕಾರ್ಯಕರ್ತರು ಹಲ್ಲೆ ನಡೆಸಿದ ಘಟನೆ ವರದಿಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕದ್ರಿ ಠಾಣಾ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ಅನ್ಯ ಸಮುದಾಯದ ಯುವಕ ಯುವತಿ ನಗರದ ಕದ್ರಿ ಪಾರ್ಕ್ ಗೆ ಆಗಮಿಸಿತ್ತು ಎಂದು ವರದಿಯಾಗಿದೆ. ಇದನ್ನು ಗಮನಿಸಿದ ಸಂಘಟನೆಯವರು ಅವರನ್ನು ಪ್ರಶ್ನಿಸಿ ಹಲ್ಲೆ ನಡೆಸಿದೆ ಎಂದು ತಿಳಿದುಬಂದಿದೆ. ಉತ್ತರ ಕರ್ನಾಟಕ ಮೂಲದ ಅನ್ಯಕೋಮಿನ ಜೋಡಿ ಕದ್ರಿ ಪಾರ್ಕ್ ಗೆ ಬಂದಿದ್ದು, ಇದನ್ನು ಪ್ರಶ್ನಿಸಿ ಸಂಘಟನೆ ಹಲ್ಲೆ ನಡೆಸಿದೆ.

ಹಲ್ಲೆ ನಡೆಸಿದ ಬಳಿಕ ಜೋಡಿಯನ್ನು ಕದ್ರಿ ಠಾಣಾ ಪೊಲೀಸರಿಗೆ ಕಾರ್ಯಕರ್ತರು ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣದ ವಿಚಾರಣೆ ನಡೆಸಿದ ಕದ್ರಿ ಠಾಣಾ ಪೊಲೀಸರು ಜೋಡಿಗೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಕಾರ್ಯಕರ್ತರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

Also Read  ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ ಕರ್ನಾಟಕಕ್ಕೆ ಚಾಂಪಿಯನ್ ಶಿಪ್

error: Content is protected !!
Scroll to Top