ಚಿಕ್ಕಮಗಳೂರು ಬೆಂಕಿ ಅವಘಡ ➤ 25  ಎಕರೆ ಕುರುಚಲು ಕಾಡು ನಾಶ

(ನ್ಯೂಸ್ ಕಡಬ) newskadaba.com  ಚಿಕ್ಕಮಗಳೂರು, ಫೆ.10.  ನಗರ ಸಮೀಪದ  ಚುರ್ಚೆಗುಡ್ಡ ಅರಣ್ಯ   ಪ್ರದೇಶದಲ್ಲಿ  ನಿನ್ನೆ ರಾತ್ರಿ  ಬೆಂಕಿ  ಕಾಣಿಸಿಕೊಂಡಿದ್ದು,  ಬೆಂಕಿಯ  ಕೆನ್ನಾಲಿಗೆಗೆ  ಸುಮಾರು  25  ಎಕರೆ  ಪ್ರದೇಶದಲ್ಲಿದ್ದ  ಕುರುಚಲು  ಕಾಡು  ಸುಟ್ಟು  ಭಸ್ಮವಾಗಿದೆ. ಈ  ನಡುವೆ  ಬೆಂಕಿಯ  ಹಿಂದೆ  ಕಿಡಿಗೇಡಿಗಳ   ಕೃತದ  ಶಂಕೆ  ವ್ಯಕ್ತವಾಗಿದೆ.

ನಗರದ  ಹೊರವಲಯದಲ್ಲಿರುವ  ಪವಿತ್ರವನ  ಸಮೀಪದ  ಚುರ್ಚೆಗುಡ್ಡೆ  ಅರಣ್ಯ  ಪ್ರದೇಶದಲ್ಲಿ  ಈ  ಬೆಂಕಿ  ಕಾಣಿಸಿಕೊಂಡಿದೆ.  ಬೆಂಕಿ  ನಂದಿಸಲು  ಅರಣ್ಯ  ಇಲಾಖೆಯ  ಸಿಬ್ಬಂದಿ  ಕಳೆದ  ರಾತ್ರಿ  ಹರಸಾಹಸ  ಪಟ್ಟಿದ್ದು  ಬೆಂಕಿಯನ್ನು  ಸದ್ಯ ನಿಯಂತ್ರಿಸಲಾಗಿದೆ ಎಂದು  ವರದಿಯಾಗಿದೆ. ಯಾವುದೇ  ವನ್ಯಜೀವಿಗಳು  ಬೆಂಕಿಗೆ  ಸಿಲುಕಿ  ಮೃತಪಟ್ಟಿಲ್ಲ  ಎಂದು  ಅರಣ್ಯ ಇಲಾಖೆ  ಅಧಿಕಾರಿಗಳು ತಿಳಿಸಿದ್ದಾರೆ.

Also Read  ಉದ್ಯಮಿ, ಜಯಕರ್ನಾಟಕ ಸಂಸ್ಥಾಪಕ ಮುತ್ತಪ್ಪ ರೈ ಆರೋಗ್ಯದಲ್ಲಿ ಏರುಪೇರು

 

 

 

 

error: Content is protected !!
Scroll to Top